Google search engine
ಮನೆUncategorizedಕೆ.ಪಿ.ಆರ್.ಶುಗರ್ಸ್ ಕಾರ್ಖಾನೆಗೆ ಡಿ.ಸಿ. ದಿಢೀರ ಭೇಟಿ

ಕೆ.ಪಿ.ಆರ್.ಶುಗರ್ಸ್ ಕಾರ್ಖಾನೆಗೆ ಡಿ.ಸಿ. ದಿಢೀರ ಭೇಟಿ

ಕೆ.ಪಿ.ಆರ್.ಶುಗರ್ಸ್ ಕಾರ್ಖಾನೆಗೆ ಡಿ.ಸಿ. ದಿಢೀರ ಭೇಟಿ ಕಲಬುರಗಿ, ಜ.18(ಕರ್ನಾಟಕ ವಾರ್ತೆ) ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶನಿವಾರ ಅಫಜಲಪೂರ ತಾಲೂಕಿನ ಚಿಣಮಗೇರಾ ಗ್ರಾಮದಲ್ಲಿರುವ ಕೆ.ಪಿ.ಆರ್.ಶುಗರ್ಸ್ ಕಾರ್ಖಾನೆಗೆ ದಿಢೀರ ಭೇಟಿ ನೀಡಿ ಕಬ್ಬು ತೂಕ ಕಾರ್ಯ ಪರಿಶೀಲಿಸಿದರು. ಕಬ್ಬು ತೂಕ ಮಾಡುವ ಯಂತ್ರ ಕಾರ್ಯ ವಿಕ್ಷಿಸಿದಲ್ಲದೆ ಕಾರ್ಖಾನೆಯ ವಿವಿಧ ವಿಭಾಗಕ್ಕೆ ಭೇಟಿ ನೀಡಿದ ಅವರು ಕಬ್ಬು ಇಳುವರಿ ಕುರಿತು ಕಾರ್ಖಾನೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಬ್ಬು ಮಾರಾಟ ಮಾಡಲು ಬರುವ ರೈತರಿಗೆ ಕುಡಿಯುವ ನೀರು, ಶೌಚಾಲಯ, ರಾತ್ರಿ ಇರಲು ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಸೂಚಿಸಿದರು ಇನ್ನು ಸಕಾಲದಲ್ಲಿಯೆ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಬೇಕು. ಅನಗತ್ಯ ವಿಳಂಬ ಮಾಡಬಾರದು. ಹಣ ಪಾವತಿಯ ಪ್ರತಿ ವ್ಯವಹಾರವು ಪಾರದರ್ಶಕವಾಗಿರಬೇಕು ಮತ್ತು ಪ್ರತಿ ಹಂತದ ಮಾಹಿತಿ ರೈತರಿಗೆ ಒದಗಿಸಬೇಕು. ರೈತರ ಸಮಕ್ಷಮ ತೂಕ ಮಾಡಬೇಕು ಎಂಬಿತ್ಯಾದಿ ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತರೊಂದಿಗೆ ಸಂವಾದಿಸಿ ಅವರ ಸಮಸ್ಯೆ ಆಲಿಸಿದರು. ತಹಶೀಲ್ದಾರರ ಸಂಜೀವಕುಮಾರ ದಾಸರ್ ಸೇರಿದಂತೆ ಕಾರ್ಖಾನೆಯ ಉಪಾಧ್ಯಕ್ಷರು, ಇತರೆ ಅಧಿಕಾರಿಗಳು, ರೈತ ಮುಖಂಡರು ಇದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!