Home Uncategorized ಟ್ರ್ಯಾಕ್ಟರ್ ಹಿಂಚಾಲನೆ ಸ್ಪರ್ಧೆಯಲ್ಲಿ ಸತತವಾಗಿ ಎರಡು ಬಾರಿ ಪ್ರಥಮ ಬಹುಮಾನ ಪಡೆದ ವೆಂಕಟೇಶ್ ಗೌಡ್

ಟ್ರ್ಯಾಕ್ಟರ್ ಹಿಂಚಾಲನೆ ಸ್ಪರ್ಧೆಯಲ್ಲಿ ಸತತವಾಗಿ ಎರಡು ಬಾರಿ ಪ್ರಥಮ ಬಹುಮಾನ ಪಡೆದ ವೆಂಕಟೇಶ್ ಗೌಡ್

0
ಟ್ರ್ಯಾಕ್ಟರ್ ಹಿಂಚಾಲನೆ ಸ್ಪರ್ಧೆಯಲ್ಲಿ ಸತತವಾಗಿ ಎರಡು ಬಾರಿ ಪ್ರಥಮ ಬಹುಮಾನ ಪಡೆದ ವೆಂಕಟೇಶ್ ಗೌಡ್

ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಜೈಗ್ರಾಮ ಗ್ರಾಮದ ಯುವಕ ವೆಂಕಟೇಶ್ ಗೌಡ್ ಟ್ರ್ಯಾಕ್ಟರ್ ಹಿಂಚಾಲನೆ ಸ್ಪರ್ಧೆಯಲ್ಲಿ ಸತತವಾಗಿ ಎರಡು ಬಾರಿ ಪ್ರಥಮ ಬಹುಮಾನ ಪಡೆದು ಗ್ರಾಮದ ಗೌರವ ಹೆಚ್ಚಿಸಿದ್ದಾರೆ. ತೆಲಂಗಾಣ ರಾಜ್ಯದ ನಾರಾಯಣಪೇಟ ಜಿಲ್ಲೆಯ ಬೈರಾಮಕೊಂಡ ಜಾತ್ರೆ ಹಾಗೂ ಯಾದಗಿರಿ ಜಿಲ್ಲೆಯ ತೋರಣತಿಪ್ಪ ಗ್ರಾಮದ ಜಾತ್ರೆಯಲ್ಲಿ ನಡೆದ ಟ್ರ್ಯಾಕ್ಟರ್ ಹಿಂಚಾಲನೆ ಸ್ಪರ್ಧೆಯಲ್ಲಿ ವೆಂಕಟೇಶ್ ಗೌಡ್ ಅವರು ಮೊದಲ ಸ್ಥಾನ ಪಡೆದಿದ್ದಾರೆ ತಂದೆ ಸಣ್ಣ ಶೇಖರಪ್ಪ ಗೌಡ್ ಅವರ ಪುತ್ರನಾದ ವೆಂಕಟೇಶ್ ಸಾಧನೆಗೆ ಜೈಗ್ರಾಮ ಗ್ರಾಮದ ಜನರು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಡಾ. ಪ್ರಕಾಶ ಜೈಗ್ರಾಮ ಯುವಕರಿಗೆ ಪ್ರೇರಣೆ ನೀಡಿ, ಇನ್ನಷ್ಟು ಯುವಕರು ಕ್ರೀಡೆ ಹಾಗೂ ಸ್ಪರ್ಧೆಗಳ ಮೂಲಕ ಗ್ರಾಮಕ್ಕೆ ಕೀರ್ತಿ ತರುವಂತೆ ಕರೆ ನೀಡಿದರು ವೆಂಕಟೇಶ್ ಗೌಡ್ ಅವರ ಸಾಧನೆಗೆ ಗ್ರಾಮಸ್ಥರು ಶುಭಾಶಯಗಳನ್ನು ತಿಳಿಸಿ, ಮುಂದೆಯೂ ಇದೇ ರೀತಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!