Home Uncategorized ಕಣೆಕಲ್ ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಮೊಸಳೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು

ಕಣೆಕಲ್ ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಮೊಸಳೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು

0
ಕಣೆಕಲ್ ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಮೊಸಳೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು

ಕಣೆಕಲ್ ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಮೊಸಳೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು ಯಾದಗಿರಿ:ಗ್ರಾಮದ ಜನರು ನೀರಿಗೆ ಇಳಿಯುವ ಸಮಯದಲ್ಲಿ ಮತ್ತು ಜಾನುವಾರುಗಳನ್ನು ಇಳಿಸುವಾಗ ಜಾಗ್ರತೆ ವಹಿಸಬೇಕು. ಅರಣ್ಯ ಇಲಾಖೆ ಸಿಬ್ಬಂದಿಗಳು ನಿರಂತರವಾಗಿ ಮೊಸಳೆಗಳ ಬಗ್ಗೆ ನಿಗಾವಹಿಸಲಿದ್ದಾರೆ ಎಂದು ಅರಣ್ಯ ಇಲಾಖೆಯ ಡಿ.ವೈ.ಆರ್.ಎಫ್.ಓ ಭೀಮಾಶಂಕರ ಗಣಪುರ ಅವರು ತಿಳಿಸಿದರು ಕಣೆಕಲ್ ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದ ಕೆರೆಯಲ್ಲಿನ ಮೊಸಳೆಯನ್ನು ಸತತ 16 ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಅವರು ಮಾತನಾಡಿದರು ಮೊಸಳೆ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಇಲಾಖೆಗೆ ತಿಳಿಸಿದರೆ ಅವುಗಳನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು ಈ ಸಂದರ್ಭದಲ್ಲಿ ಅರಣ್ಯ ಬೀಟ್ ಅಧಿಕಾರಿ ಶ್ರವಣಕುಮಾರ ಹೊಸಮಠ, ಅರಣ್ಯ ವೀಕ್ಷಕ ಸೋಮಯ್ಯ ಪ್ರಚಂಡಿ, ವಿಶ್ವರಾಧ್ಯ ಶರಣಪ್ಪ, ಮೀನುಗಾರರಾದ ಭಾಗಪ್ಪ, ಯಲ್ಲಪ್ಪ, ಗ್ರಾಮಸ್ಥರಾದ ಸುರೇಶ ಗೌಡ ಬೀರಾದರ್ ಪಾಟೀಲ, ಮಲ್ಲು ಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!