ಅ ಣಿಬಿ ಗ್ರಾಮದಲ್ಲಿ ಅಕ್ರಮ ಮದ್ಯ ವಿರೋಧಿ ಜಾಗೃತಿ ಅಭಿಯಾನ; ಗ್ರಾಮಸ್ಥರಿಂದ ಮದ್ಯ ಸೇವನೆ ಬಿಡುವ ಪ್ರತಿಜ್ಞೆ ಅಣಿಬಿ (ಯಾದಗಿರಿ): ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಯಾದಗಿರಿ ಜಿಲ್ಲಾ ಪಂಚಾಯತ್ ಸಂಯೋಗದಲ್ಲಿ ಅಣಿಬಿ ಗ್ರಾಮ ಪಂಚಾಯತಿಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮದ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಅಭಿಯಾನವನ್ನು ಭವ್ಯವಾಗಿ ಆಯೋಜಿಸಲಾಯಿತು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಮಾತನಾಡಿ, ಅಕ್ರಮ ಮದ್ಯ ಗ್ರಾಮಗಳ ಆರ್ಥಿಕ-ಸಾಮಾಜಿಕ ರಚನೆಗೆ ತಂದಿರುವ ಅನಾಹುತಗಳನ್ನು ಕಳವಳದಿಂದ ವಿವರಿಸಿದರು “ಮದ್ಯದ ಕಾರಣ ಅನೇಕ ಕುಟುಂಬಗಳು ಹಾಳಾಗಿವೆ, ಮಹಿಳೆಯರು, ಮಕ್ಕಳು ಮತ್ತು ಹಿರಿಯರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವುದು ನಮ್ಮ ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು ಮದ್ಯ ಸೇವನೆಯಿಂದ ಉಂಟಾಗುವ ಆರೋಗ್ಯ ತೊಂದರೆಗಳು, ಆರ್ಥಿಕ ಹಾನಿ, ಗೃಹ ಕಲಹ, ಅಪರಾಧ ಪ್ರಮಾಣದ ಏರಿಕೆ ಮುಂತಾದ ವಿಷಯಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ ಶರಣಪ್ಪ ಸಲಾದಪುರ ಅವರು “ಮದ್ಯ ಮತ್ತು ಮಾದಕ ವಸ್ತುಗಳ ಬಾಧೆಯಿಂದ ರಾಜ್ಯವನ್ನು ಮುಕ್ತಗೊಳಿಸುವುದು ನಮ್ಮ ಗುರಿ. ಇದನ್ನು ಸಾಧಿಸುವಲ್ಲಿ ನಿಮ್ಮ ಸಹಕಾರ ಅತ್ಯಂತ ಮುಖ್ಯ,” ಎಂದು ಹೇಳಿದರು ಗ್ರಾಮಸ್ಥರಿಂದ ಮದ್ಯ ಸೇವಿಸದಿರಲು ಪ್ರತಿಜ್ಞೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಗ್ರಾಮಸ್ಥರು, ಯುವಕರು, ಮಹಿಳೆಯರು ಮತ್ತು ಸ್ಥಳೀಯ ನಾಯಕರು ಒಟ್ಟಾಗಿ ಮದ್ಯ ಸೇವಿಸದಿರಲು ಹಾಗೂ ಅಕ್ರಮ ಮದ್ಯ ಮಾರಾಟವನ್ನು ಗ್ರಾಮದಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಲು ಸಮೂಹ ಪ್ರತಿಜ್ಞೆ ಸ್ವೀಕರಿಸಿದರು ಕಾರ್ಯಕ್ರಮದಲ್ಲಿ ಶಹಾಪುರ ತಾಲ್ಲೂಕು ಇಓ ಬಸವರಾಜ ಶರಬೈ, ರಾಜು ಅಣಿಬಿ, ಬಾಪುಗೌಡ ಅಣಿಬಿ, ಪಿಡಿಓ ರಮೇಶ್ ನಾಯಕ, ಆರೋಗ್ಯ ಇಲಾಖೆಯ ವೈದ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಸ್ಥಳೀಯ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು





