ರಾಷ್ಟ್ರ ಪ್ರೇಮ ಬೆಳೆಸುವುದು,ಭಾವೈಕ್ಯತೆ ಸಾರುವುದೇ ಸೇವಾ ದಳದ ಪ್ರಥಮಾದ್ಯತೆ-ಶಶೀಲ ಜಿ. ನಮೋಶಿ ಕಲಬುರಗಿ,ಡಿ.30(ಕರ್ನಾಟಕ ವಾರ್ತೆ) ಶಿಕ್ಷಕರು, ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಸಂಘಟನೆ ಬೋದಿಸುವುದರ ಜೊತೆಗೆ ರಾಷ್ಟ್ರಧ್ವಜ, ರಾಷ್ಷ್ರಗೀತೆ ಮಹತ್ವ ತಿಳಿಸಿ ರಾಷ್ಟ್ರಪ್ರೇಮ ಬೆಳೆಸುವುದು ಹಾಗೂ ರಾಷ್ಟ್ರೀಯ ಭಾವೈಕ್ಯತೆ ಸಾರುವುದೇ ಭಾರತ ಸೇವಾ ದಳದ ಮೂಲ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಶಶೀಲ್ ಜಿ. ನಮೋಶಿ ಹೇಳಿದರು ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕಲಬುರಗಿ ಉತ್ತರ ವಲಯದ ವ್ಯಾಪ್ತಿಗೊಳಪಡುವ ಕಲಬುರಗಿ ನಗರದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಆಯೋಜಿಸಿದ ಸೇವಾದಳ ಸಪ್ತಾಹ ಆಚರಣೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದುರುಭಾರತ ಸೇವಾದಳದ ಮೊದಲಿನ ಹೆಸರು ಹಿಂದೂಸ್ಥಾನಿ ಸೇವಾದಳ. ಇದು ಸ್ಥಾಯನೆಯಾಗಿದ್ದು 1923 ಡಿಸೆಂಬರ್ 28ರಲ್ಲಿ. ಇದರ ಪ್ರಥಮ ಅಧ್ಯಕ್ಷರು ಪಂಡಿತ ಜವಹಾರಲಾಲ ನೆಹರು. ದೇಶ ಸ್ವಾತಂತ್ರ್ಯದ ನಂತರ 1950ರ ಮಾರ್ಚ 16 ರಂದು “ಭಾರತ ಸೇವಾದಳ” ಎಂದು ಮರು ನಾಮಕರಣ ಮಾಡಲಾಯಿತು. ಸಂಸ್ಥಾಪಕ ಸಂಚಾಲಕರಾಗಿ ಪದ್ಮಭೂಷಣ ಡಾ. ನಾ.ಸು. ಹರ್ಡೀಕರ್ ಕಾರ್ಯನಿರ್ವಹಿಸಿದ್ದರು ಎಂದು ಭಾರತ ಸೇವಾ ದಳ ನಡೆದು ಬಂದ ಹಾದಿ ವಿವರಿಸಿದರು. ಭಾರತ ಸೇವಾದಳ ಪ್ರಸ್ತುತ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರಪ್ರೇಮ ರಾಷ್ಟ್ರೀಯ ಭಾವೈಕ್ಯತೆ ಜೊತೆಗೆ ನೈತಿಕ ಶಿಕ್ಷಣ, ದೈಹಿಕ ಶಿಕ್ಷಣ, ವಿದ್ಯಾರ್ಥಿಗಳಿಗೆ ಕವಾಯತು, ಸಲಕರಣೆಗಳ ವ್ಯಾಯಾಮ, ಯೋಗಾಸನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳ ಕುರಿತು ನಿರಂತರ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದರು. ಸೇವಾ ದಳದ ಸಪ್ತಾಹದ ಅಂಗವಾಗಿ ಪ್ರತಿ ದಿನ ವಿವಿಧ ಸ್ಫರ್ಧೆ-ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿ ವೃಂದ ಸಕ್ರಿಯವಾಗಿ ಭಾಗವಹಿಸಿ ಸೇವಾದಳ ತತ್ವ ಸಿದ್ಧಾಂತಗಳು ಹಾಗೂ ನೈತಿಕ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರೀಯ ಮಹಾನ್ ನಾಯಕರ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ದೇಶಕ್ಕೆ ಕೀರ್ತಿ ತರಬೇಕೆಂದು ಶಶೀಲ ಜಿ. ನಮೋಶಿ ಅವರು ಮಕ್ಕಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮೊದಲನೇ ದಿನ ಜರುಗಿದ ಯೋಗಾಸನ ಹಾಗೂ ದೇಶ ಭಕ್ತಿ ಗೀತೆಗಳ ಗಾಯನದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಸೇವಾದಳದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಶಾಲಾ ಮಕ್ಕಳಿಗೆ ಯೋಗ ಮತ್ತು ನೈತಿಕ ಶಿಕ್ಷಣದ ಕುರಿತು ಜಿಲ್ಲಾ ಸಂಘಟಿಕರಾದ ಚಂದ್ರಶೇಖರ ಜಮಾದಾರ ಉಪನ್ಯಾಸ ನೀಡಿದರು. ಲಕ್ಷೀಪುತ್ರ ಪೂಜಾರಿ ಅವರು ಯೋಗದ ಮಹತ್ವ ತಿಳಿಸಿಕೊಟ್ಟರು ದೇಶ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಯೂ ಜರುಗಿತುಇನ್ನು ಜ.3ರ ವರೆಗೆ ನಡೆಯುವ ಸಪ್ತಾಹದ ಅಂಗವಾಗಿ ಡಾ.ನಾ.ಸು ಹರ್ಡಿಕರ್ ಅವರ ಜೀವನ ಸಾಧನೆ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮಾದಕ ವಸ್ತುಗಳ ಸೆವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ಹಾಗೂ ವೇಷ-ಭೂಷಣ ಸ್ಪರ್ಧೆ ನಡೆಯಲಿವೆಕಾರ್ಯಕ್ರಮವನ್ನು ಭಾರತ ಸೇವಾ ದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾರತ ಸೇವಾ ದಳದ ಸಮಿತಿ ಸದಸ್ಯರಾದ ಮಂಜುನಾಥ ನಾಲವಾರಕರ್, ಲಕ್ಷೀಕಾಂತ ರಾಖಾ, ಅಂಜನಾದೇವಿ ದೇಶಪಾಂಡೆ, ವಸತಿ ನಿಲಯದ ಮೇಲ್ವಿಚಾರಕರಾದ ಬಸಮ್ಮಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಸುವರ್ಣ ಉಪಸ್ಥಿತರಿದ್ದರು





