Google search engine
ಮನೆUncategorizedಕಲಾ ಪ್ರತಿಭೋತ್ಸವ-2025ರ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ ಗಾಯಿತ್ರಿ ಉದ್ಘಾಟಿಸಿದರು

ಕಲಾ ಪ್ರತಿಭೋತ್ಸವ-2025ರ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ ಗಾಯಿತ್ರಿ ಉದ್ಘಾಟಿಸಿದರು

ನಗರದ ಜೆ.ಸಿ.ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಭಾಗ ವತಿಯಿಂದ ಬೆಂಗಳೂರು ವಲಯ ಮಟ್ಟದ ಕಲಾ ಪ್ರತಿಭೋತ್ಸವ-2025ರ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ ಗಾಯಿತ್ರಿ ಅವರು ಉದ್ಘಾಟಿಸಿದರು ಬೆಂಗಳೂರು ವಿಭಾಗದ 9 ಜಿಲ್ಲೆಗಳಿಂದ ಒಟ್ಟು 158 ಜನ ಸ್ಪರ್ಧಿಗಳು ಮತ್ತು 3 ನಾಟಕ ತಂಡಗಳು ಭಾಗವಹಿಸಿದ್ದವು. ಬೆಂಗಳೂರು ನಗರ ಜಿಲ್ಲೆಯಿಂದ ಭಾಗವಹಿಸಿದ್ದ ಸ್ಪರ್ಧಾರ್ಥಿಗಳಲ್ಲಿ ಬಾಲ ಪ್ರತಿಭೆ ಸ್ಪರ್ಧೆಯ ಶಾಸ್ತ್ರೀಯ ನೃತ್ಯದಲ್ಲಿ ಗೌರಿ ಮನೋಹರಿ ಎಚ್. ಪ್ರಥಮ ಸ್ಥಾನ, ಜನಪದ ಗೀತೆಯಲ್ಲಿ ಶರಧಿ ಎಂ. ದ್ವಿತೀಯ ಸ್ಥಾನ, ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಯುಕ್ತ ಪುನರ್ವ ಎಸ್.ಪಿ., ದ್ವಿತೀಯ ಸ್ಥಾನ. ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತದಲ್ಲಿ ಆಯುಷ್ ಪಿ. ಹಾವೇರಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಕಿಶೋರ ಪ್ರತಿಭೆ ಸ್ಪರ್ಧೆಯ ಶಾಸ್ತ್ರೀಯ ನೃತ್ಯದಲ್ಲಿ ದಿಶಾ ಯು. ದ್ವಿತೀಯ ಸ್ಥಾನ, ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತದಲ್ಲಿ ತ್ರಿದಾತ್ ಸಾಗರ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯುವ ಪ್ರತಿಭೆ ಸ್ಪರ್ಧೆಯ ಶಾಸ್ತ್ರೀಯ ನೃತ್ಯದಲ್ಲಿ ಲಾಸ್ಯ ಪ್ರಿಯ ದ್ವಿತೀಯ ಸ್ಥಾನ. ಸುಗಮ ಸಂಗೀತದಲ್ಲಿ ನಿಶಿತಾ ಪ್ರಸಾದ್ ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀಲಕ್ಷ್ಮಿ ಬಿಸ್ನಳ್ಳಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್ ಮುಕುಂದರಾಜ್, ಕರ್ನಾಟಕ ಜಾಣಪದ ಅಕಾಡೆಮಿಯಅಧ್ಯಕ್ಷರಾದ ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಬೆಂಗಳೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ ಎನ್.ಚಲವಾದಿ ಹಾಗೂ ಬೆಂಗಳೂರು ವಲಯ ಮಟ್ಟದ 09 ಜಿಲ್ಲೆಗಳ ಸಹಾಯಕ ನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!