ಬೋಯಿ ಬೆಸ್ತ ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ಮೇಲೆ ಹಾಗೂ ನಕಲಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಭೋವಿ (ವಡ್ಡರ) ಸಮಾಜ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೋಯಾ, ಬೋಯಿ, ಬೋಯ್ಯಾ ಸಮುದಾಯವರು ಬೆಸ್ತ ಸಮುದಾಯದ ಪರ್ಯಾಯ ಪದಗಳಿದ್ದು, ಈಗಿನ ಉತ್ತರ ಕರ್ನಾಟಕ ಭಾಗದ ಭೋವಿ (ವಡ್ಡರ) ಸಮಾಜದವರಿಗೆ 1976 ರಲ್ಲಿ ಆಗಿನ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವರಾಜ ಅರಸು ರವರು ಭೋವಿ ಸಮಾಜಕ್ಕೆ ಮೈಸೂರ ಪ್ರಾಂತ್ಯಾದಲ್ಲಿ ಮಾತ್ರ ಮೀಸಲಾತಿ ಕಲ್ಪಿಸಿಕೊಟ್ಟಿದ್ದರು ಬಾಂಬೆ-ಕರ್ನಾಟಕ ವಾಗಲೀ, ಹೈದ್ರಾಬಾದ-ಕರ್ನಾಟಕ ಪ್ರದೇಶದಲ್ಲಿ ಪ.ಜಾತಿ ಮೀಸಲಾತಿ ಕೊಟ್ಟಿರಲಿಲ್ಲತದನಂತರ ವಡ್ಡರ ಸಮಾಜದ ಹಿರಿಯ ಮುಖಂಡರು ಅನೇಕ ಹೋರಾಟಗಳು ಮಾಡಿ ಮನವಿ ಮಾಡಿದ ಪ್ರಯುಕ್ತ ಕರ್ನಾಟ ರಾಜ್ಯಾದ್ಯಂತ ಏಕ ರೂಪವಾಗಿ (ಭೋವಿ ವಡ್ಡರ) ಸಮಜಕ್ಕೆ ಕೊಟ್ಟಂತ ಮೀಸಲಾತಿಯನ್ನು ನಕಲಿ ಪ್ರಮಾಣ ಪತ್ರಗಳನ್ನು ನೀಡಿ ಗ್ರಾಮ ಸೇವಕರಿಗೆ, ಕಂದಾಯ ನಿರೀಕ್ಷಕರಿಗೆ ಸುಳ್ಳು ಮಾಹಿತಿ ನೀಡಿ ಬೋಯಿ (ಬೆಸ್ತ) ಸಮುದಾಯದವರು ಭೋವಿ ಪ್ರಜಾತಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುನಿಜವಾದ ಭೋವಿ ವಡ್ಡರ ಪ.ಜಾತಿಯ ಮೀಸಲಾತಿಯನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಇಂತಹ ಬೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದಯುತ್ತಿರುವವರಿಗೆ ಹಾಗೂ ಯಾವುದೇ ರೀತಿಯ ಕುಲಂಕುಶವಾಗಿ ತನಿಖೆಮಾಡದೇ, ಸುಳ್ಳುಮಾಹಿತಿ ನೀಡಿರುವುದು ಸತ್ಯವೆಂದು ಬೊಟ್ಟಿ ಪ್ರಮಾಣ ಪತ್ರ ನೀಡುತ್ತಿರುವ ಅಧಿಕಾರಿಗಳೆ, ಸಂಬಂಧಪಟ್ಟ ಮೇಲಾಧಿಕಾರಿಗಳು, ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತವಾದ ಕಾನೂನಿನ ಕ್ರಮವನ್ನು ತೆಗೆದುಕೊಂಡು ಅಮಾನತ್ತು ಮಾಡಿ ಕ್ರಿಮಿನಲ್ ಮೊಕ್ಕದ್ದಮ್ಮ ಹೂಡಬೇಕು.ಅಂತ ಆಗ್ರಹಿಸಲಾಗಿದೆ





