ಎಸ್ಟಿ ಮೀಸಲಾತಿ ಹೋರಾಟದ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿವಕುಮಾರ್ ನಾಟೀಕಾರ್ ಹಾಗು ಶೋಭಾ ಬಾಣಿ ಅವರು ಹೋರಾಟ ನಡೆಸಲು ಮುಂದಾಗಿದ್ದಾರೆ ಹಾಗಾಗಿ ಆ ಹೋರಾಟದಿಂದ ಯ್ಯಾವುದೇ ಪ್ರಯೋಜನೆ ಇಲ್ಲ ಅದಕ್ಕೆ ಸಮಾಜದಚಜನ ಸಾಥ್ ನೀಡಬಾರದು ಅಂತ ಜಿಲ್ಲಾ ಕೋಲೀ ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಸಮನ್ವಯ ಸಮೀತಿ ಕರೆ ನೀಡಿದ್ದಾರೆ ಸಮಾಜದ ಕೆಲವು ಮುಖಂಡರು ತಮ್ಮ ವೈಯಕ್ತಿಕ ಸ್ವಾರ್ಥ ರಾಜಕಾರಣಕ್ಕಾಗಿ ಮುಗ್ಧ ಸಮಾಜ ಬಂಧುಗಳಿಗೆ ಎಸ್.ಟಿ. ಹೆಸರಿನ ಮೇಲೆ ಅನಾವಶ್ಯಕ ಹೋರಾಟದ ನೆಪದಲ್ಲಿ ದಿಕ್ಕು ತಪ್ಪಿಸಿ ದಿನಾಂಕ: 29-12-2025 ರಂದು ಎಸ್ಪಿಗಾಗಿ ಹೋರಾಟ ಮಾಡುವುದಾಗಿ ತಿಳಿಸುತ್ತಾರೆ. ಇದರಿಂದ ಸಮಾಜಕ್ಕೆ ಯಾವುದೇ ಲಾಭವಾಗುವುದಿಲ್ಲ. 40 ವರ್ಷವೂ ಕೂಡಾ ಇದೇ ಹೋರಾಟದಲ್ಲಿ ಕಳೆದು ಹೋಗಿದ್ದು, ಸಮಾಜಕ್ಕೆ ಯಾವುದೇ ಲಾಭ ಆಗಿಲ್ಲ ಆದ್ದರಿಂದ ನಾವೆಲ್ಲರೂ ಕೋಲಿ-ಕಬ್ಬಲಿಗ ಮತ್ತು ಇತರೆ ಪದಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಎಲ್ಲಾ ಹಂತದಲ್ಲಿ ಪ್ರಯತ್ನ ಮಾಡುತ್ತಿದ್ದು, ಕೆಲವರು ತಮ್ಮ ಸ್ವಾರ್ಥ ಮತ್ತು ವೈಯಕ್ತಿಕ ಲಾಭ & ರಾಜಕೀಯದ ಹಿತ ದೃಷ್ಟಿಯಿಂದ ಎಸ್.ಟಿ ಹೆಸರಿನ ಮೇಲೆ ದಿನಾಂಕ : 29-12-2025 ರಂದು ಹೋರಾಟ ಮಾಡಲು ಮುಗ್ಧ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಆದ್ದರಿಂದ ಉದ್ದೇಶಿತ ಹೋರಾಟವನ್ನು ಸಮಾಜದ ಹಿತದೃಷ್ಟಿಯಿಂದ ಹಿಂಪಡೆಯುತ್ತಿದ್ದೇವೆ.ಅಂತ ಮಾಜಿ ಸಚಿವ ಬಾಬಯರಾವ್ ಚಿಂಚನಸೂರ್ ವಿಧಾನಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ್ ತಿಳಿಸಿದ್ದಾರೆ





