ಶತಾಯುಷದಿ ವಿದ್ಯಾಧರ ಗುರೂಜಿ ಸ್ವಾತಂತ್ರ್ಯ ಸೇನಾನಿಯವರ 111ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳೊಸಲಾಗಿದೆ ಕಲ್ಯಾಣ ಕರ್ನಾಟಕ ಭಾಗದ ಚಿರಪರಿಚಿತ ಸ್ವಾತಂತ್ರ್ಯ ಹೋರಾಟಗಾರರಾದ ವಿದ್ಯಾಧರ ಗುರುಜಿಯವರ 111ನೇಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ದಿನಾಂಕ: 30-12-2025 ರಂದು ಬೆಳಿಗ್ಗೆ 11.30 ಗಂಟೆಗೆ ಹಿಂದಿ ಪ್ರಚಾರ ಸಭಾ ಕಲಬುರಗಿಯ ಆವರಣದಲ್ಲಿ ಆಯೋಜಿಸಲಾಗುವುದು. ಶ್ರೀ ವಿಧ್ಯಾಧರ ಗುರುಜಿಯವರ ಅನುಭವದ ಚಿಂತನೆ ರಾಷ್ಟ್ರ ನಿರ್ಮಾಣಕ್ಕೆ ಅತ್ಯಂತ ಉಪಯೋಗ ಚಿಂತನೆಗಳಾಗಿರುವುದು. ಇವು ನಮ್ಮ ನಿಮ್ಮೆಲ್ಲರಿಗೂ ಇಂದು ಪ್ರಸ್ತುತವಾಗಿರುವುದು. ಕಾರಣ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿರುತ್ತದೆಂದು ಅಶೋಕ ಗುರೂಜಿ, ಸಂಜು ಪಾಟೀಲ್, ಗೀರಿಶ ಇನಾಮದಾರ, ಅಣವೀರ ಪಾಟೀಲ್, ಶಿವಾನಂದ ಸ್ವಾಮಿ, ಎಸ್.ಎಚ್. ಬರಗಾಲಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ





