Google search engine
ಮನೆUncategorizedಸಾಧನೆಗೆ ಶಕ್ತಿಯಾದ ಗೌರವ ಡಾಕ್ಟರೇಟ : ಜನಾಬ ಹಾಫಿಜ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ

ಸಾಧನೆಗೆ ಶಕ್ತಿಯಾದ ಗೌರವ ಡಾಕ್ಟರೇಟ : ಜನಾಬ ಹಾಫಿಜ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ

ಸಾಧನೆಗೆ ಶಕ್ತಿಯಾದ ಗೌರವ ಡಾಕ್ಟರೇಟ : ಜನಾಬ ಹಾಫಿಜ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ ಕಲಬುರಗಿ : ಯಾವುದೇ ಗೌರವ ಗಳಿಸಲು ವ್ಯಕ್ತಿಯ ಸಾಧನೆಗಳು ಮತ್ತು ಸಮಾಜಮುಖಿ ಕೆಲಸಗಳಿಂದ ಸಾಧ್ಯ. ಸಾಧಿಸುವುದು ಇನ್ನೂ ಬಹಳಷ್ಟಿದೆ. ಈ ಗೌರವ ಡಾಕ್ಟರೇಟ್ ನನಗೆ ಸಾಧಿಸಲು ಪ್ರೇರಣೆಯಾಗಲಿದೆ ಎಂದು ಕಲಬುರಗಿಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಕುಲಾಧಿಪತಿ ಜನಾಬ ಹಾಫೀಜ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ ನುಡಿದರು ಅವರು ನಗರದ ಶರಣಬಸವ ವಿಶ್ವವಿದ್ಯಾಲಯ ನೀಡಿರುವ 2025ನೇ ಸಾಲಿನ ಗೌರವ ಡಾಕ್ಟರೇಟ ಪದವಿಯನ್ನು ಬುಧವಾರ ಸ್ವೀಕರಿಸಿ ಮಾತನಾಡಿದರು ನನಗೆ ಡಾಕ್ಟರೇಟ್ ಪದವಿ ಖುಷಿ ತಂದಿದೆ. ಜೊತೆಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಟ್ಟಿದೆ. ನಾನು ಶರಣಬಸವ ವಿಶ್ವವಿದ್ಯಾಲಯಕ್ಕೆ ಕೃತಜ್ಞನಾಗಿದ್ದೇನೆ. ಖಾಜಾ ಬಂದಾನವಾಜರ ಆಶೀರ್ವಾದ ಮತ್ತು ನನ್ನ ಸುತ್ತ ಮುತ್ತಲಿನ ಜನರ ಪ್ರೀತಿ, ವಿಶ್ವಾಸ, ಸಹಾಯ, ಸಲಹೆ ಹಾಗೂ ಸಹಕಾರ ದಿಂದ ಇದು ಸಾಧ್ಯವಾಯಿತು. ನಾವು ಎಲ್ಲ ಒಂದೇ ಟೀಮ್ ಆಗಿ ಕೆಲಸ ಮಾಡುತ್ತೇವೆ. ಮಾನವ ಸೇವೆಯೇ ಖಾಜಾ ಬಂದಾನವಾಜ ವಿವಿ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ. ನಾವೆಲ್ಲ ಒಂದು ಕುಟುಂಬವಾಗಿ ಈ ಮಾನವ ಸೇವೆಯನ್ನು ಮುಂದುವರೆಸುತ್ತೇವೆ ಎಂದರು. ತಂದೆಯವರಾದ ದಿವಂಗತ ಡಾ. ಸಯ್ಯದ ಶಹಾ ಖುಸ್ರೋ ಹುಸೇನಿಯವರನ್ನು ನೆನೆದ ಅವರು ತಂದೆಯ ಆದರ್ಶ್ ನಡೆ ಮತ್ತು ಮಾರ್ಗದರ್ಶನ ನಮ್ಮ ಮುಂದಿನ ಜೀವನಕ್ಕೆ ದಾರಿ ದೀಪವಾಗಿದೆ ಎಂದು ಹೇಳಿದರು ಉಪಸ್ಥಿತರಿದ್ದ ಎಲ್ಲರಿಗೆ ಧನ್ಯವಾದಗಳನ್ನು ತಿಳಿಸಿದರು ಈ ಮೊದಲು ಕಾರಣ ನಿಮಿತ್ಯ ಶರಣಬಸವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಜ್ಜಾದೆ ನಶೀನರು ಡಾಕ್ಟರೇಟ್ ಸ್ವಿಕರಿಸಲು ಹಾಜರಿರಲಿಲ್ಲ ಆದ್ದರಿಂದ ಬುಧವಾರ ಮಧ್ಯಾಹ್ನ ಬಡಿ ದೇವಡಿಯಲ್ಲಿ ಪದವಿ ಪ್ರದಾನ ಮಾಡಲಾಯಿತು ಶರಣಬಸವೇಶ್ವರ್ ಸಂಸ್ಥಾನದ 9ನೇ ಪೀಠಧಿಪತಿ ಚಿ. ದೊಡ್ಡಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ನಿರ್ದೇಶಕರು ಡಾ. ವಿ. ಡಿ. ಮೈತ್ರಿ, ವಿಶ್ವವಿದ್ಯಾಲಯದ ಕುಲಪತಿ ಡಾ. ಅನಿಲಕುಮಾರ್ ಜಿ ಬಿಡವೆ, ಕುಲಸಚಿವರು ಡಾ.ಎಸ್. ಜಿ. ಡೊಳ್ಳೆಗೌಡರ್, ಕುಲಸಚಿವರು ಮೌಲ್ಯ ಮಾಪನ ಡಾ. ಎಸ್ ಎಚ್ ಹೊನ್ನಳ್ಳಿ, ಡೀನ್ ಲಕ್ಷ್ಮಿ ಪಾಟೀಲ್ ಮಾಕಾ, ಟಿ ವಿ ಶಿವಾನಂದನ, ಕೆಬಿಎನ್ ವಿಶ್ವವಿದ್ಯಾಲಯದ ನಿರ್ದೇಶಕ ಡಾ ಮುಸ್ತಫಾ ಅಲ ಹುಸ್ಸೇನಿ, ಉಪ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ, ಸಮ ಉಪಕುಲಪತಿ ಪ್ರೊ. ಅಶಫಾಕ ಅಹ್ಮದ, ಕುಲಸಚಿವ ವಿಲಾಯತ ಅಲಿ, ಕೆಈಎಸ್ ಸೇಕ್ರೆಟರಿ ಪ್ರೊ. ಎಎಮ್ ಪಠಾಣ, ಐಕ್ಯೂ ಎ ಸಿ ನಿರ್ದೇಶಕ ಡಾ ಬಷೀರ್ ಹಾಗೂ ಡೀನರಾದ ಪ್ರೊ ನಿಶಾತ ಆರಿಫ್ ಹುಸ್ಸೇನಿ, ಡಾ ಜಮಾ ಮೂಸ್ವಿ, ಡಾ ಗುರು ಪ್ರಸಾದ, ಡಾ ಶ್ರೀನಿವಾಸ, ಡಾ ಸುಭಾಸ ಕಮಲ, ಹಾಜರಿದ್ದರು ಖಾಜಾ ಬಂದಾನವಾಜ ದರ್ಗಾ ಮತ್ತು ಮತ್ತು ಶರಣಬಸವ ಸಂಸ್ಥೆಗಳು ಕಲಬುರಗಿಯ 2 ಕಣ್ಣುಗಳಿದ್ದಂತೆ. ವಿದ್ಯಾ ದಾನ, ಅನ್ನ ದಾನ ಹಾಗೂ ಮಾನವ ಸೇವೆಯಲ್ಲಿ ಎರಡು ಜೊತೆ ಜೊತೆಯಲ್ಲಿ ಸಾಗಿವೆ ನಮ್ಮ ಕಮಿಟಿಯ ಎಲ್ಲ ಸದಸ್ಯರು ಬಹಳ ಖುಷಿಯಿಂದ ಸಜ್ಜಾದೆ ನಶೀನರ ಹೆಸರನ್ನು ಆಯ್ಕೆ ಮಾಡಿದರು ಈ ಎರಡು ಸಂಸ್ಥೆಗಳು ರಾಷ್ಟ್ರೀಯ ಐಕ್ಯತೆ, ಸಾಮರಸ್ಯ, ಸೌಹಾರ್ದತೆ ಯನ್ನು ಮೂಡಿಸುತ್ತವೆ. ಸಯ್ಯದ ಮುಹಮ್ಮದ ಅಲಿ ಅಲ್ ಹುಸೇನಿಯವರಿಗೆ ಡಾಕ್ಟರೇಟ್ ನೀಡಿರುವುದು ಸಂತೋಷವಾಗಿದೆ. ಬಸವರಾಜ ದೇಶಮುಖ ಕಾರ್ಯದರ್ಶಿ, ಶರಣಬಸವ ವಿದ್ಯಾ ವರ್ಧಕ ಸಂಘ ಫೋಟೋ ಕ್ಯಾಪ್ಷನ್ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಕುಲಾಧಿಪತಿ, ಕೆಬಿಎನ ದರ್ಗಾ ಸಜ್ಜಾದೆ ನಶೀನ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿವರಿಗೆ ಶರಣ ಬಸವ ವಿವಿವತಿಯಿಂದ ಬುಧವಾರ ಗೌರವ ಡಾಕ್ಟರೇಟ ಪದವಿ ಪ್ರದಾನ ಮಾಡಿದ ಸಂದರ್ಭ ಸಂಸ್ಥಾನದ 9ನೇ ಪೀಠಧಿಪತಿ ಚಿ. ದೊಡ್ಡಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ್ ದೇಶಮುಖ, ನಿರ್ದೇಶಕರು ಡಾ. ವಿ. ಡಿ. ಮೈತ್ರಿ, ವಿಶ್ವವಿದ್ಯಾಲಯದ ಕುಲಪತಿ ಡಾ ಅನಿಲಕುಮಾರ್ ಜಿ ಬಿಡವೆ, ಕುಲಸಚಿವರು ಡಾ.ಎಸ್. ಜಿ. ಡೊಳ್ಳೆಗೌಡರ, ಕುಲಸಚಿವರು ಮೌಲ್ಯಮಾಪನ ಡಾ. ಎಸ್ ಎಚ್ ಹೊನ್ನಳ್ಳಿ, ಡೀನ್ ಲಕ್ಷ್ಮಿ ಪಾಟೀಲ್ ಮಾಕಾ ಕಾಣಬಹುದು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!