ಅಂಕರ್: ಕಲಬುರಗಿ ಜಿಲ್ಲೆಯಲ್ಲಿ ಯಗ್ಗಿಲ್ಲದೆ ನಡಿತಾ ಇದೆ ಅಕ್ರಮ ಗಣಿಗಾರಿಕೆ. ಯಾವುದೇ ಪರವಾನಿಗೆ ಪಡೆಯದೆ ರಾಜಾರೋಷವಾಗಿ ಈ ದಂದೆ ನಡೆಸಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಜಿಲ್ಲಾಡಳಿತ ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಹಾಗದ್ರೆ ಈ ಅಕ್ರಮ ಗಣಿಗಾರಿಕೆ ಎಲ್ಲಿ ನಡಿತಾ ಇದೆ ಅಂತಿರಾ? ಇದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ….. ಹೀಗೆ ನೂರಾರು ಎಕರೆ ಜಮೀನಿನ ಒಡಲು ಬಗೆದು ಕಲ್ಲು ಮತ್ತು ಮುರುಮು ತೆಗೆದು ನಡೆಸಲಗುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳ, ಮತ್ತೊಂದೆಡೆ ಇಲ್ಲಿ ಬಗೆದು ತೆಗೆದ ಮುರುಮ್ ಮತ್ತು ಕಲ್ಲು ಸಾಗಾಣಿಕೆ ಮಾಡುತ್ತಿರುವ ಟಿಪ್ಪರ್ ವಾಹನಗಳು ಹೌದು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ತಾಲ್ಲೂಕಿನ ಸಿಂದಗಿ ಗ್ರಾಮದ ಸರ್ವೆ ನಂಬರ್ 95/4 ಮತ್ತು ಸರ್ವೆ ನಂಬರ್ 91/5 ರಲ್ಲಿ. ಕಲಬುರಗಿ ನಗರದಿಂದ ಸ್ವಲ್ಪ ಅಂತರದಲ್ಲಿ ಈ ಅಕ್ರಮ ಗಣಿಗಾರಿಕೆ ನಡಿತಾ ಇದ್ರು ಕೂಡ ಜಿಲ್ಲಾಡಳಿತ ಮತ್ರ ಇದಕ್ಕೆ ಬ್ರೇಕ್ ಹಾಕುವಂತ ಕೆಲಸಕ್ಕೆ ಮುಂದಾಗಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಯಾವೂದೇ ಪರವಾನಿಗೆ ಪಡೆಯದೆ ರಾಜಾರೋಶವಾಗಿ ಪ್ರತಿನಿತ್ಯ ಇಲ್ಲಿಂದ ನೂರಾರು ಟಿಪ್ಪರ್ ಭೂ ಅದಿರು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ………………….ಬೈಟ್: ಲಕ್ಷ್ಮೀಕಾಂತ ಸ್ವಾದಿ ( ಸಾಮಾಜಿಕ ಹೊರಾಟಗಾರರು)………………..ವೈ೨: ಇನ್ನ ಜಿಲ್ಲಾಧ್ಯಂತ ಅನೇಕ ಕಡೆಗಳಲ್ಲಿ ಈ ಅಕ್ರಮ ಗಣಿಗಾರಿಕೆ ದಂದೆ ನಡೆಸಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದಂತ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಭಂದಿಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಸಿಬ್ಬಂದಿ ಗಳ ಕೊರತೆಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಅಕ್ರಮ ಗಣಿಗಾರಿಕೆ ದಂದೆಗಳ ಮೇಲೆ ಸಮರ್ಪಕವಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನಿತರೆ ಇಲಾಖೆಗಳಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲೂ ಕೂಡ ಸಿಭಂದಿಗಳ ಅಭಾವ ಇದೆ. ಹೀಗಾಗಿ ಜಿಲ್ಲೆಯಲ್ಲಿ ನಡೆಯಿತ್ತಿರುವ ಈ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಸಧ್ಯವಾಗದಿರುವದಕ್ಕೆ ಇದೊಂದು ಪ್ರಮುಖ ಕಾರಣವಾಗಿದೆ…. ……….ಬೈಟ್ ೨ ಲಕ್ಷ್ಮೀಕಾಂತ ಸ್ವಾದಿ. ( ಸಾಮಾಜಿಕ ಹೋರಾಟಗಾರರು)…………………………………. …………ವೈಸ್೩: ಒಟ್ಟಾರೆಯಾಗಿ ಜಿಲ್ಲೆಯಲ್ಲಿ ರಾಜಾರೋಶವಾಗಿ ಈ ಅಕ್ರಮ ಗಣಿಗಾರಿಕೆ ದಂದೆಗಳು ನಡೆಸಲಾಗುತ್ತಿದ್ದು ಸರ್ಕಾರ ಕೂಡ ಕಲಬುರಗಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖಯಲ್ಲಿನ ಸಿಬಂಧಿಗಳ ಕೊರತೆ ನಿಗಿಸುವ ಮೂಲಕ ಈ ಭಾಗದಲ್ಲಿನ ಅಕ್ರಮ ಈ ದಂದೆಗಳಿಗೆ ಬ್ರೇಕ್ ಹಾಕಲು ಅನುವು ಮಾಡಿ ಕೊಡಬೇಕಿದೆ
ಕಲಬುರಗಿ ಜಿಲ್ಲೆಯಲ್ಲಿ ಯಗ್ಗಿಲ್ಲದೆ ನಡಿತಾ ಇದೆ ಅಕ್ರಮ ಗಣಿಗಾರಿಕೆ
ಕಲಬುರಗಿ ಜಿಲ್ಲೆಯಲ್ಲಿ ಯಗ್ಗಿಲ್ಲದೆ ನಡಿತಾ ಇದೆ ಅಕ್ರಮ ಗಣಿಗಾರಿಕೆ





