ಕಲಬಯರಗಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದಲ್ಲಿ ಕೇವಲ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾಧುಗಳನ್ನು ಕರೆಸಿಕೊಳ್ತಿದ್ದಾರೆ ಇಷ್ಟು ದಿನ ಯಾರಿಗೆ ಶಾಸಕರ ಬೆಂಬಲ ಇದೆ ಅಂತ ಸಿದ್ದರಾಮಯ್ಯ ಅವರು ಹೇಳಿದ್ರು. ಈಗ ಡಿಕೆಶಿ ಅವರು ತಾಕತ್ತಿದ್ರೆ ಸಾಬೀತು ಮಾಡು ಅನ್ನೋ ರೀತಿ ಸಿದ್ದರಾಮಯ್ಯಗೆ ಹೇಳ್ತಿದ್ದಾರೆ ಈ ರೀತಿಯಾಗಿ ರಾಜ್ಯ ಸರ್ಕಾರ ಒಂದೂ ರೀತಿ ಕೋಮಾ ಗೆ ಹೋಗಿ ಬಿಟ್ಟಿದೆ ಇಷ್ಟು ದಿನ ನಾನೆ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಎರಡು ದಿನದಿಂದ ಸೈಲೆಂಟ್ ಆಗಿದ್ದಾರೆ ಯಾಕೋ. ನವೆಂಬರ್ 27, 28 ಮತ್ತು ಡಿಸೆಂಬರ್ 1, 2 ರಂದು ಇಡೀ ರಾಜ್ಯದಲ್ಲಿ ನಾವು ಹೋರಾಟ ಮಾಡ್ತಿದ್ದೇವೆ*. ಬೆಳೆ ಹಾನಿ, ನಾಶದ ಪರಿಹಾರಕ್ಕಾಗಿ ಹೋರಾಟ ಮಾಡ್ತೇವೆ ಎಐಸಿಸಿ ಅಧ್ಯಕ್ಷ ಅವರು ಧೈರ್ಯದಿಂದ ನೀವೇ ಐದು ವರ್ಷ ಸಿಎಂ ಎಂದು ಹೇಳ ಬಹುದಿತ್ತು, ಹೇಳುತ್ತಿಲ್ಲ*. ಪರಮೇಶ್ವರ ಅವರು ನಾನೇ ಮುಖ್ಯಮಂತ್ರಿ ಅಂತಿದ್ದಾರೆ. ಈರೀತಿಯಾಗಿ ರಾಜ್ಯ ಸರ್ಕಾರದ ಸ್ಥಿತಿ ಆಗಿದೆ ನಾನೇ ಈ ಹಿಂದೆ ಹೇಳಿದ್ದೆ ನವೆಂಬರ್ ಕ್ರಾಂತಿ ಆಗುತ್ತೇ ಅಂತ ಈಗ ಅದೇ ರೀತಿ ನಡೆಯುತ್ತಿದೆ ನಾವು ಸರ್ಕಾರ ರಚನೆ ಮಾಡುವ ಪ್ರಯತ್ನ ಮಾಡಲ್ಲ ಕಾಂಗ್ರೆಸ್ ಶಾಸಕರನ್ನ ತೊಗೊಂಡು ನಾವು ಸರ್ಕಾರ ಮಾಡಲ್ಲ ನಾವು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಾರ್ಟಿಯಲ್ಲಿ ಸಿಎಂ ಕುರ್ಚಿಗಾಗಿ ಸಿಕ್ಕಾಪಟ್ಟೆ ದುಡ್ಡು ಚಾಲ್ತಿ ಯಲ್ಲಿದೆ ನಾವು ಚುನಾವಣೆಗೆ ಹೋಗುತ್ತೇವೆ 2028 ರಲ್ಲಿ 170 ಸ್ಥಾನ ಪಡೆದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡುತ್ತೇ ಅಂತ ಕಲಬುರಗಿಯಲ್ಲಿ ವಿಪಕ್ಷ ನಾಯಕ R. ಅಶೋಕ್ ಹೇಳಿಕೆ ನೀಡಿದ್ದಾರೆ
ಕಲಬಯರಗಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸುದ್ದಿಗೋಷ್ಟಿ
ಕಲಬಯರಗಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸುದ್ದಿಗೋಷ್ಟಿ





