ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಕೋನ ಸಾಗರ ಕೆರೆ ತುಂಬಿದ್ದು ಗ್ರಾಮಸ್ಥರಲ್ಲಿ ಸಂತಸಮಾನ ಮಾಡಿದೆ. ಕಳೆದ ವರ್ಷ ಮಳೆಬಾರದೇ ತಾಲೂಕಿನಲ್ಲಿ ಯಾವ ಕೆರೆಗಳು ಸಹ ತುಂಬದ ಕಾರಣ ಈಗಾಗಲೇ ಕೆಲವು ಕಡೆ ಕುಡಿಯುವ ನೀರಿಗೂ ಸಹ ಆಹಾಕಾರ ಶುರುವಾಗಿತ್ತು ಸುಮಾರು ನಾಲೈದು ದಿನಗಳಿಂದ ಮಳೆ ಬಂದಿದ್ದು ಈಗ ಹಳ್ಳಗಳು ತುಂಬಿವೆ. ಕೋನಸಾಗರದ ಕೆರೆ ತುಂಬಿ ಭರ್ತಿಯಾಗಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.





