ಯಲಹಂಕದ ಎಸ್ಟೀಮ್‌ಹುಡ್ ವಿಲ್ಲಾ ಅಪಾರ್ಟ್‌ಮೆಂಟ್ ಮಳೆಯಿಂದ ಸಂಪೂರ್ಣ ಜಲಾವೃತವಾಗಿತ್ತು. ಬಿಬಿಎಂಪಿ ಆಯುಕ್ತರು ಹಾಗೂ ಅರಣ್ಯ ಇಲಾಖೆ ಆಯುಕ್ತರು ಸಹ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಆದರೆ ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಗುದ್ದಾಟದಿಂದ ಬಾಕಿ ಉಳಿದರುವ ರಾಜಕಾಲುವೆ ಕಾಮಗಾರಿಗೆ, ತಾತ್ಕಾಲಿಕ ಪರಿಹಾರ ಕಲ್ಪಸಿದ್ದಕ್ಕೆ ಸ್ಥಳೀಯರು ಆಕ್ರೋಶ ಗೊಂಡಿದ್ದಾರೆ. ಶಾಶ್ವತ ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.





