ನಮ್ಮ ದೇಶವನ್ನು ಭಾರತ, ಹಿಂದೂಸ್ತಾನ್ ಎಂದೆಲ್ಲಾ ಕರೆಯುತ್ತೇವೆ, ಇದೇನು ಹೊಸ ವಿಚಾರವಲ್ಲ, ಅಭಿವೃದ್ದಿ ಪರವಾಗಿ ಮಾತಾಡುವುದು ಬಿಟ್ಟು ಭಾವನಾತ್ಮಕ, ಹಿಂದುತ್ವದ ಬಗ್ಗೆ ಮಾತಾಡಿದರೆ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಹಿಂದೂ ರಾಷ್ಟ್ರ ಇವರೇನು ಮಾಡೋದು, ಮುಸಲ್ಮಾನರು ನೂರಾರು ವರ್ಷಗಳಿಂದ ಬಾಳಿ ಬದುಕುತ್ತಿದ್ದಾರೆ. ಜಾತಿ ಧರ್ಮಗಳ ಬಗ್ಗೆ ತಂದಿಡುವುದನ್ನು ಸಂವಿಧಾನ ಸಹಿಸುವುದಿಲ್ಲ ಎಂದರು.





