ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಇಂದು ಈಶಾನ್ಯ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರಣ ಐಟಿ ಅವರು ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಅಮರನಾಥ ಪಾಟೀಲ್ ಅವರು ಎಲೆಕ್ಷನ್ ಕಮೀಷನ್’ಗೆ ಸಲ್ಲಿಸಿದ್ದ ಅಫಿಡವಿಟ್’ನಲ್ಲಿ ಅವರ ಬಿಕಾಂ ಪದವಿ ಮುಗಿದಿದೆ ಎಂದು ತಿಳಿಸಿದ್ದಾರೆ ಆದರೆ ನನ್ನ ಹತ್ತಿರ ಅವರು ಬಿಕಾಂ ಇನ್’ಕಂಪ್ಲೀಟ್ ಎಂಬುದರ ದಾಖಲೆಗಳಿವೆ ಹಾಗಾಗಿ ಅವರ ಬಗ್ಗೆ ಮತದಾರರು ತಿಳಿದುಕೊಳ್ಳಬೇಕಾಗಿದೆ ಎಂದರು.





