ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ.ಸುಶೀಲ ಬಿ. ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದ ಎರಡನೇ ಹಂತದ ಮತದಾನ ಅಧಿಕಾರಿಗಳ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮತದಾನ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ನೀಡುವ ತರಬೇತಿಯ ಕುರಿತು ಹಾಗೂ ನೀಡಿದ ಸೌಲಭ್ಯಗಳ ಕುರಿತು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಆಯಕ್ತ ಪ್ರಕಾಶ್ ಕುದುರಿ ಕೆ ಎಸ್, ತಹಸೀಲ್ದಾರ ಯಲ್ಲಪ್ಪ ಸುಬೇದಾರ್, ವಡಿಗೇರಾ ತಹಸೀಲ್ದಾರ ವಿಜಯಕುಮಾರ್ ಹಾಗೂ ನ್ಯಾಷನಲ್ ಲೆವೆಲ್ ಮಾಸ್ಟರ್ ಟ್ರೇನರಾದ ಶ್ರೀ ಶಶಿ ಶೇಖರ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು





