ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾವಿಭಾಗ (ಕನ್ನಡ ಮಾಧ್ಯಮ)ದಲ್ಲಿ ವಿಜಯಪುರ ನಗರದ ಎಸ್. ಎಸ್. ಪಿ. ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ 596 ಅಂಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಬೀಳಗಿ ಗ್ರಾಮದವರಾದ ವೇದಾಂತ ನಾವಿ ವಿಜಯಪುರ ನಗರದ ಶಾಸ್ತ್ರಿನಗರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಇದ್ದುಕೊಂಡು ಎಸ್. ಎಸ್. ಪಿಯು ಕಾಲೇಜಿನಲ್ಲಿ ಓದಿದ್ದಾರೆ.





