Home COOKING WITH KITCHEN TIPS ಕಾಶ್ಮೀರಿ ಸ್ಟೈಲ್ ಫಿಶ್ ಫ್ರೈ

ಕಾಶ್ಮೀರಿ ಸ್ಟೈಲ್ ಫಿಶ್ ಫ್ರೈ

0
ಕಾಶ್ಮೀರಿ ಸ್ಟೈಲ್ ಫಿಶ್ ಫ್ರೈ

 

ಕಾಶ್ಮೀರಿ ಫಿಶ್ ಫ್ರೈಗ ಬೇಕಾದ ಸಾಮಗ್ರಿ

ಮೀನು

ಅರಿಶಿನ ಪುಡಿ

ಉಪ್ಪು – ರುಚಿಗೆ ತಕ್ಕಷ್ಟು

ಅಕ್ಕಿ ಹಿಟ್ಟು

ನಿಂಬೆ ರಸ

ಗರಂ ಮಸಾಲಾ

ಶುಂಠಿ ಬೆಳ್ಳುಳ್ಳಿ ಪೇಸ್ಟ್

ಸೋಂಪು ಪುಡಿ

ಜೀರಿಗೆ ಪುಡಿ

ಕೆಂಪು ಮೆಣಸಿನ ಪುಡಿ

ಕಾಶ್ಮೀರಿ ಕೆಂಪು ಮೆಣಸಿನ ಪುಡಿ

ಎಣ್ಣೆ – ಕರಿಯಲು

ಕಾಶ್ಮೀರಿ ಫಿಶ್ ಫ್ರೈ ತಯಾರಿಸುವ ವಿಧಾನ

ಮೀನಿನ ಮೂರು ಬಾರಿ ಚೆನ್ನಾಗಿ ತೊಳೆಯಿರಿ

ಬಟ್ಟಲಿನಲ್ಲಿ ಅರಿಶಿನ, ಸಾಮಾನ್ಯ ಹಾಗೂ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸೋಂಪು ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ

ಪೇಸ್ಟ್ ತೆಳುವಾಗದಂತೆ ಎಚ್ಚರವಹಿಸಿ. ಈ ಮಸಾಲಾ ಪೇಸ್ಟ್‌ಅನ್ನು ಸ್ವಚ್ಛಗೊಳಿಸಿದ ಮೀನಿಗೆ ಸಮಾನವಾಗಿ ಲೇಪಿಸಿ

1 ಗಂಟೆಯವರೆಗೆ ಫ್ರಿಜ್‌ನಲ್ಲಿಟ್ಟರೆ ಮಸಾಲಾ ಚೆನ್ನಾಗಿ ಸೇರಿ, ರುಚಿ ಮತ್ತಷ್ಟು ಹೆಚ್ಚಿಸುತ್ತದೆ

ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಎಣ್ಣೆ ಸಾಕಷ್ಟು ಕಾದ ನಂತರ, ಉರಿಯನ್ನು ಮಧ್ಯಮಕ್ಕೆ ಇಳಿಸಿ, ಮ್ಯಾರಿನೇಟ್ ಮಾಡಿದ ಮೀನಿನ ತುಂಡುಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕಿ ಮೀನು ಎಣ್ಣೆಯಲ್ಲಿ ಬೇಯುತ್ತಿರುವಾಗ, ಅದರ ಮೇಲೆ ಸ್ವಲ್ಪ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಮತ್ತು ಸೋಂಪು ಪುಡಿಯನ್ನು ಚಿಮುಕಿಸಿ

ಮೀನಿನ ತುಂಡುಗಳು ಎರಡೂ ಬದಿಯಲ್ಲಿ ಚಿನ್ನದ ಕಂದು ಬಣ್ಣಕ್ಕೆ ತಿರುಗಿ, ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿಯಿರಿ ಬಿಸಿಬಿಸಿಯಾದ ಕಾಶ್ಮೀರಿ ಫಿಶ್ ಫ್ರೈ ಸಿದ್ಧ

LEAVE A REPLY

Please enter your comment!
Please enter your name here

error: Content is protected !!