Home COOKING WITH KITCHEN TIPS  ರಸ್ಮಲೈ  ತಯಾರಿಸುವ ವಿಧಾನ  

 ರಸ್ಮಲೈ  ತಯಾರಿಸುವ ವಿಧಾನ  

0
 ರಸ್ಮಲೈ  ತಯಾರಿಸುವ ವಿಧಾನ   

 

ಬೇಕಾಗುವ ಪದಾರ್ಥ

 

ಪನೀರ್

 

ಸಕ್ಕರೆ ಪಾಕ

 

ಏಲಕ್ಕಿ

 

ರಬ್ಡಿ ತಯಾರಿಸಲು

ಹಾಲು

ಸಕ್ಕರೆ, ಸ್ವಲ್ಪ

ಕೇಸರಿ

ಏಲಕ್ಕಿ ಪುಡಿ

ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾ

 

ತಯಾರಿಸುವ ವಿಧಾನ

ಹಾಲನ್ನು ಚೆನ್ನಾಗಿ ಕುದಿಸಿ, ಅದಕ್ಕೆ ವಿನೆಗರ್ ಅಥವಾ ಲಿಂಬೆ ರಸ ಸೇರಿಸಿ ಹಾಲು ಒಡೆಯುವಂತೆ ಮಾಡಿ

ಒಡೆದ ಹಾಲನ್ನು ತೆಳುವಾದ ಬಟ್ಟೆಯಲ್ಲಿ ಸೋಸಿ, ತಣ್ಣೀರಿನಿಂದ ತೊಳೆದು (ಲಿಂಬೆ ವಾಸನೆ ಹೋಗಲಾಡಿಸಲು) 30 ನಿಮಿಷಗಳ ಕಾಲ ನೀರು ಬಸಿಯಲು ನೇತುಹಾಕಿ

ನಂತರ ಪನೀರ್ ಅನ್ನು ಅಂಗೈಯಿಂದ 8-10 ನಿಮಿಷಗಳ ಕಾಲ ನಯವಾಗುವವರೆಗೆ ಚೆನ್ನಾಗಿ ನಾದಿಕೊಳ್ಳಿ ಸಣ್ಣ ಉಂಡೆಗಳನ್ನು ಮಾಡಿ ಸ್ವಲ್ಪ ಚಪ್ಪಟೆಗೊಳಿಸಿಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆ ಹಾಕಿ ಕುದಿಸಿ

 

ಕುದಿಯುವ ಪಾಕಕ್ಕೆ ತಯಾರಿಸಿದ ಪನೀರ್ ಉಂಡೆಗಳನ್ನು ಹಾಕಿ 10-12 ನಿಮಿಷಗಳ ಕಾಲ ಮುಚ್ಚಿ ಬೇಯಿಸಿ.ಬೆಂದ ನಂತರ ಉಂಡೆಗಳು ಗಾತ್ರದಲ್ಲಿ ದ್ವಿಗುಣಗೊಳ್ಳುತ್ತವೆಇವುಗಳನ್ನು ಪಾಕದಿಂದ ತೆಗೆದು ನಿಧಾನವಾಗಿ ಹಿಸುಕಿ ಸಕ್ಕರೆ ಪಾಕವನ್ನು ತೆಗೆಯಿರಿ

 

  • ಇನ್ನೊಂದು ಪಾತ್ರೆಯಲ್ಲಿ 1 ಲೀಟರ್ ಹಾಲು ಹಾಕಿ ಅದು ಅರ್ಧದಷ್ಟು ಆಗುವವರೆಗೆ ಕುದಿಸಿ.
  • ಅದಕ್ಕೆ ಸಕ್ಕರೆ, ಕೇಸರಿ, ಏಲಕ್ಕಿ ಪುಡಿ ಮತ್ತು ಒಣ ದ್ರಾಕ್ಷಿ-ಗೋಡಂಬಿ ಚೂರುಗಳನ್ನು ಸೇರಿಸಿ

 

  • ಸಕ್ಕರೆ ಪಾಕದಿಂದ ತೆಗೆದ ಪನೀರ್ ಉಂಡೆಗಳನ್ನು ತಯಾರಾದ ಬಿಸಿ ರಬ್ಡಿಯೊಳಗೆ ಹಾಕಿ.
  • ಕನಿಷ್ಠ 4 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಫ್ರಿಡ್ಜ್‌ನಲ್ಲಿ ಇಟ್ಟು ತಣ್ಣಗಾದ ಮೇಲೆ ಸರ್ವ್ ಮಾಡಿ

 

 

LEAVE A REPLY

Please enter your comment!
Please enter your name here

error: Content is protected !!