ಲೋಕಸಭಾ ಚುನಾವಣೆ-೨೦೨೪ರ ನೀತಿ ಸಂಹಿತೆ ಹಿನ್ನಲೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು ೧. ೭೦ ಕೋಟಿ ರೂ. ನಗದು ಹಣ, ೨೦೧೨. ೩೦ ಲೀಟರ್ ಮದ್ಯದ ಮೌಲ್ಯ ೮. ೦೨ ಕೋಟಿ ಸೇರಿ ಒಟ್ಟು ೧. ೭೯ ಕೋಟಿ ರೂ. ಗಳ ಮೌಲ್ಯವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ೪೦ ಸಾವಿರ ರೂ. ಗಳ ಮೌಲ್ಯದ ಗಾಂಜಾ ಸಹ ಜಪ್ತಿ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ. ಎಂ ಸುದ್ದಿಗಾರರಿಗೆ ತಿಳಿಸಿದ್ದಾರೆ.





