ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ ನಂ.31 ಸ್ವಸ್ತಿಕ ನಗರದ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಶ್ರೀಮತಿ ಜಗದೇವಿಯವರಿಗೆ ನಾಯಿ ದಾಳಿ ಮಾಡಿದ ಘಟನೆ ಕುರಿತಾಗಿ ಯ್ಯಾವುದೇ ಅಧಿಕಾರಿಗಳು ಸ್ಪಂಧನೆ ನೀಡಿಲ್ಲ ಅಂತ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಲಾಗಿದೆ ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ ನಂ.31 ಸ್ವಸ್ತಿಕ ನಗರ ಇಲ್ಲಿ ದಿನಾಂಕ: 14/01/2026 ರಂದು ಕಲಬುರಗಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರಾದ ಶ್ರೀಮತಿ ಜಗದೇವಿ ವಯಸ್ಸು: 45 ವರ್ಷ ಇವರಿಗೆ ಕರ್ತವ್ಯದ ಸಮಯದಲ್ಲಿ ಇದರಿಂದ ಜಗದೇವಿಯವರಿಗೆ ಗುಂಪಾಗಿ ನಾಯಿ ದಾಳಿ ಮಾಡಿದ್ದು, ಗಾಯವಾಗಿರುತ್ತದೆ. ಗಾಯಗೊಂಡ ನಂತರ ಸಾರ್ವಜನಿಕರ ಸಹಾಯದಿಂದ ಸ್ವತಃ ತಾವೇ ಆಟೋದಲ್ಲಿ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಮತ್ತು ಜಗದೇವಿಯವರು ರೂ.8000/- ಕೊಟ್ಟು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇವರಿಗೆ ಯಾವುದೇ ರೀತಿಯಲ್ಲಿ ಸ್ವಂತ ಮನೆ ಇರುವುದಿಲ್ಲ. ಕಾರಣ ಇಲ್ಲಿಯವರೆಗೆ ಕಲಬುರಗಿ ಮಹಾನಗರ ಪಾಲಿಜೆಯಿಂದ ಸಂಭಂಧಪಟ್ಟ ಅಧಿಕಾರಿಗಳು, ಸುಪರವೈಸರಗಳು ಹಾಗೂ ವೈದ್ಯಕೀಯ ಅಧಿಕಾರಿಗಳು ಅಲ್ಲದೆ ಮಹಾಪೌರರು, ಉಪ ಮಹಾಪೌರರು ಹಾಗೂ ವೈದ್ಯಕೀಯ ಸದಸ್ಯರು ಯಾವುದೇ ರೀತಿಯಿಂದ ವಿಚಾರಣೆ ಮಾಡಿರುವುದಿಲ್ಲ ‘ಮತ್ತು ಆರೋಗ್ಯದ ಬಗ್ಗೆ ಯಾವುದೇ ಸೌಲಭ್ಯ ಒದಗಿಸಿರುವುದಿಲ್ಲ ಆದ ಕಾರಣ ಇದನ್ನು ಗಂಭೀರವಾಗಿ ಪರಿಗಣಿಸಿ ಶ್ರೀಮತಿ ಜಗದೇವಿಯವರಿಗೆ ಆರೋಗ್ಯದ ಚಿಕಿತ್ಸೆ ಕೊಡಿಸಬೇಕು. ಹಾಗೂ ಇವರಿಗೆ ಒಂದು ಮನೆಯನ್ನು ಒದಗಿಸಿಕೊಡಬೇಕು. ಮತ್ತು ಮುಂದಿನ ಆಗು-ಹೋಗುಗಳಿಗೆ ನೇರವಾಗಿ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರ ವರ್ಗ ನೇರ ಹೊಣೆ. ಒಂದು ವೇಳೆ ಶ್ರೀಮತಿ ಜಗದೇವಿಯವರಿಗೆ ಯಾವುದೆ ರೀತಿಯಲ್ಲಿ ಸ್ಪಂದನೆ ಮಾಡದೇ ಇದ್ದ ಪಕ್ಷದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು. ಎಂದು ಎಚ್ಚರಿಸಲಾಗಿದೆ





