ಕೊಡದುರ ಗ್ರಾಮದಲ್ಲಿ 12 ಕುರಿ ಕಳ್ಳತನ ಕಾಳಗಿ ತಾಲೂಕಿನ ಕೊಡದುರ ಗ್ರಾಮದಲ್ಲಿ ಅನ್ನಪೂರ್ಣ ಗಂಡ ವಿಜಯಕುಮಾರ 10 ಕುರಿ.ರಾಜು ವಡೆಯರಾಜ 2 ಕುರಿ ರಾತ್ರಿ 1 ಗಂಟೆಗೆ 12 ಕುರಿಗಳನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ ಬದುಕಿಗೆ ಇದುವೆ ಆಧಾರವಾಗಿದ್ದ ಈ ಕುಟುಂಬಗಳು ಈಗ ಬೀದಿಗೆ ಬಂದಿವೆ.ಸುಮಾರು 1.5 ಲಕ್ಷ ರೂ ಮೌಲ್ಯದ 12 ಕುರಿಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ಕಾಳಗಿ ತಾಲೂಕಿನ ಕೊಡದುರ ಗ್ರಾಮದಲ್ಲಿ ರಾತ್ರಿ ನಡೆದಿದೆ ಅನ್ನಪೂರ್ಣ ವಿಜಯಕುಮಾರ ಮತ್ತು ರಾಜು ವಡೆಯರಾಜ ಕುರಿಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದರು ರಾತ್ರಿ ಸಮಯದಲ್ಲಿ ಯಾರೋ ಖದೀಮರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ ಈ ಗ್ರಾಮದಲ್ಲಿ ಮುಂಚೇವು ಕಳ್ಳತನ ಆಗಿವೆ ಆದ್ದರಿಂದ ಗ್ರಾಮ ಪಂಚಾಯತ ಕಡೆಯಿಂದ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ ಆದರೆ ಅದು ಕೆಟ್ಟು ಹೋಗಿದೆ ಒಂದು ವೇಳೆ ಸಿಸಿಟಿವಿ ಕಾರ್ಯ ಮಾಡುತ್ತಿದರೆ ಕಳ್ಳರು ಸಿಗುತ್ತೀದ್ದರು ಎಂದು ರೈತರು ತಿಳಿಸಿದರು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ರು ತನಿಖೆ ಆರಂಭೀಸಿದ್ದಾರೆ ಕಳ್ಳರನ್ನು ಹಿಡಿದು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು ಈ ಸಂದರ್ಭದಲ್ಲಿ ಪ್ರಸಾದ್ ಹಳ್ಳಿ SSVTV ನ್ಯೂಸ್ ಕಾಳಗಿ





