Home Uncategorized ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಂದುವರಿಯಲಿ; ಮಾತೆ ಗಂಗಾದೇವಿ

ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಂದುವರಿಯಲಿ; ಮಾತೆ ಗಂಗಾದೇವಿ

0
ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಂದುವರಿಯಲಿ; ಮಾತೆ ಗಂಗಾದೇವಿ

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಂದುವರಿಯಲಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಐದು ವರ್ಷ ಪೂರ್ಣಾವಧಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಆಡಳಿತದ ದಾಖಲೆಗಳಿಗೆ ಸರಿಗಟ್ಟುವಂತೆ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಬಸವಣ್ಣನವರ ತತ್ವಗಳಿಗೆ ಅನುಯಾಯಿ ಹಾಗೂ ಅಭಿಮಾನಿಯಾಗಿದ್ದು, ಎಲ್ಲರನ್ನೂ ಸಮಾನವಾಗಿ ನೋಡುವ ಬಸವತತ್ವವನ್ನು ಅನುಸರಿಸುತ್ತಿದ್ದಾರೆ. ಮಾತಿಗೆ ಬದ್ಧರಾಗಿ ನಡೆದುಕೊಳ್ಳುತ್ತಿರುವ ಕಾರಣ, ಅವರು ಐದು ವರ್ಷ ಪೂರ್ಣಾವಧಿ ಆಡಳಿತ ನಡೆಸಲಿ ಎಂಬುದು ತಮ್ಮ ಆಶಯ ಎಂದು ಮಾತೆ ಗಂಗಾದೇವಿ ಹೇಳಿದರು

LEAVE A REPLY

Please enter your comment!
Please enter your name here

error: Content is protected !!