ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಮತ್ತು ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಯಿಂದ ಶೃಂಗೇರಿಯಿಂದ ಶ್ರೀಶೈಲದವರಿಗೆ ಮೂರನೇ ಹಂತದ ದಿನಾಂಕ 27 ಡಿಸೆಂಬರ್ ಗಂಗಾವತಿಯಿಂದ ಪ್ರಾರಂಭಗೊಂಡು ಜನವರಿ 4ನೇ ತಾರೀಕು ಜಲಜಾಗೃತಿ ಜನಜಾಗೃತಿ ಪಾದಯಾತ್ರೆಯ ಮಂತ್ರಾಲಯದಲ್ಲಿ ಮುಕ್ತಾಯ ಸಮಾರೋಪ ಸಮಾರಂಭ ದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ ಪಾಟೀಲ್ ವೀರಾಪುರ್ ಹಾಗೂ ಮಾಜಿ ಮುಖ್ಯಮಂತ್ರಿಗಳ ದಿವಂಗತ ಜಿ ಎಚ್ ಪಾಟೀಲ್ ಅವರ ಮಗನಾದ ಮಾಜಿ ಶಾಸಕರಾದ ಮಹಿಮಾ ಪಟೇಲ್ ಮತ್ತು ಕೆರೆಗಳ ಜೀವನೋದ್ಧಾರದ ಅಭಿಯಾನದ ಮುಖ್ಯಸ್ಥರಾದ ಮಲ್ಲಿಗೆಯವರು ಗಂಗಾವತಿಯ ಸಂತೋಷ್ ಕೆಲೋಜಿ ಯಾದಗಿರಿಯ ಶ್ರೀ ಮಹೇಶ್ ರೆಡ್ಡಿ ಮುದ್ನಾಳ್ ವಿಶ್ವ ಸೇವಾ ಮಿಷನ್ ಸಂಸ್ಥೆಯ ಅಧ್ಯಕ್ಷರಾದ ಚಿತ್ತಾಪುರದ ಸಾಮಾಜಿಕ ಕಾರ್ಯಕರ್ತರಾದ ಅಯ್ಯಪ್ಪ ರಾಮ ತೀರ್ಥ ರೈಚೂರಿನ ವಕೀಲರಾದ ಗೌರೀಶ್ ಬಿಚ್ಚಾಲೆ ಹಾಗೂ ರಾಜೇಂದ್ರಸಿವಾಲಿ ಉಪಸ್ಥಿತರಿದ್ದರು. ಅಭಿಯಾನದಲ್ಲಿ ನದಿಗಳು ಉಳಿದರೆ ಜೀವ ಸಂಕುಲನ ಉಳಿದಿತ್ತು ಅದಕ್ಕಾಗಿ ಪ್ರತಿಯೊಬ್ಬರೂ ನೀರಿನ ಮೂಲಗಳು ನದಿಗಳ ಸಂರಕ್ಷಣೆಗಾಗಿ ಸಂಕಲ್ಪ ಮಾಡಬೇಕೆಂದು ತಿಳಿಸಿದರು





