ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವು ದಕ್ಷಿಣ ಭಾರತದ ಕುಂಭಮೇಳವೆಂದೆ ಫೇಮಸ್ ಆಗಿದೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಯಾದಗಿರಿ ರೊಟ್ಟಿ ಕಳುಹಿಸಲಾಯಿತು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಐಕೂರು ಗ್ರಾಮದಲ್ಲಿ ಮಹಿಳಾ ಭಕ್ತರು ಶ್ರದ್ಧಾ ಭಕ್ತಿಯಿಂದ ರೊಟ್ಟಿಯನ್ನು ತೈಯಾರಿಸಿದರು.ಐಕೂರು ಗ್ರಾಮದ ಗವಿಸಿದ್ದೇಶ್ವರ ಭಕ್ತರು 11 ಸಾವಿರ ರೊಟ್ಟಿಯನ್ನು ಮಾಡಿ ಜಾತ್ರೆಗೆ ದಾಸೋಹ ನಿಮಿತ್ತವಾಗಿ 11 ಸಾವಿರ ರೊಟ್ಟಿ ಸೇವೆ ಕಲ್ಪಿಸಿದ್ದಾರೆ.ಜಾತ್ರೆಗೆ ಐಕೂರು ಭಕ್ತರು ಟ್ರಾಕ್ಟರ್ ನಲ್ಲಿ 11 ಸಾವಿರ ರೊಟ್ಟಿಯನ್ನು ತೆಗೆದುಕೊಂಡು ಹೋದರು.ಭಕ್ತರು ತನುಮನದಿಂದ ತೈಯಾರಿಸಿದ ರೊಟ್ಟಿಯನ್ನು ಶ್ರದ್ಧಾಭಕ್ತಿಯೊಂದಿಗೆ ತೆಗೆದುಕೊಂಡು ಹೋಗಲಾಯಿತು.ಗ್ರಾಮದ ಭಕ್ತರಿಗೆ ಮುಖಂಡ ಚಂದ್ರಶೇಖರಗೌಡ ಮಾಗನೂರು ಹಾಗೂ ಮುಖಂಡರು ಸನ್ಮಾನಿಸಿ ಗೌರವಿಸಿದರು





