ಕಲಬುರಗಿ ಜಿಲ್ಲಾ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಂಧಿತರಿಂದ ವಿವಿಧ ಕಂಪನಿಯ ಒಟ್ಟು 14 ಬೈಕ್ ಜಿಪ್ತಿ ಮಾಡಲಾಗಿದೆ ಅಂತ ಪೋಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ದಿನಾಂಕ 04/07/2025 ರಂದು ರಾತ್ರಿ ವೇಳೆಯಲ್ಲಿ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಹೆಬ್ಬಾಳ ಗ್ರಾಮದಲ್ಲಿ ಬಸವರಾಜ ತಂದೆ ಜಗನ್ನಾಥ ಅಂಕಲಗಿ ಇವರ ಪಲ್ಸರ ಮೋಟಾರ ಸೈಕಲ್ ಕಳ್ಳತನವಾಗಿದ್ದು, ಈ ಬಗ್ಗೆ ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಕೇವಲ ಬೆಲೆಬಾಳುವ ಮತ್ತು ಐಶಾರಾಮಿ ಬೈಕ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿತರನ್ನು ಬಂಧಿಸುವ ಸಲುವಾಗಿ ವಿಶೇಷ ತಂಡವನ್ನು ರಚಿಸಿದ್ದು ತಂಡವು ವೈಜ್ಞಾನಿಕವಾಗಿ ಮತ್ತು ಸಂಪ್ರಾದಾಯಕ ವಿಧಾನಗಳನ್ನು ಅನುಸರಿಸಿ ತನಿಖೆ ಕೈಗೊಂಡು ನಾಗೇಶ ತಂದೆ ರಾಜಪ್ಪ ಇವರನ್ನು ಬಂಧಿಸಿ, ಆರೋಪಿತರಿಂದ ಸದರಿ ಪ್ರಕರಣದಲ್ಲಿ ಕಳುವಾದ ಬೈಕ್ ಅಲ್ಲದೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವು ಮಾಡಿದ ಒಟ್ಟು 14 ವಿವಿಧ ಕಂಪನಿಯ ಅ.ಕಿ 12.5 ಲಕ್ಷ ಮೌಲ್ಯದ ಮೋಟಾರ ಸೈಕಲಗಳನ್ನು ಜಪ್ತಿಪಡಿಸಿಕೊಂಡಿದ್ದು, ಸದರಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ





