Google search engine
ಮನೆUncategorizedಕೋಲಿ /ಕಬ್ಬಲಿಗಾ ಸಮಾಜದವರಿಗೆ ಶ್ರೀ ದತ್ತಾತ್ರೇಯರಡ್ಡ ಅಭಿನಂದನೆ ;ಕಬ್ಬಲಿಗ ಎಸ್ಟಿ ಹೋರಾಟಕ್ಕೆ ಬೆ0ಭಲಸೂಚಿಸಿದ್ದಾರೆ

ಕೋಲಿ /ಕಬ್ಬಲಿಗಾ ಸಮಾಜದವರಿಗೆ ಶ್ರೀ ದತ್ತಾತ್ರೇಯರಡ್ಡ ಅಭಿನಂದನೆ ;ಕಬ್ಬಲಿಗ ಎಸ್ಟಿ ಹೋರಾಟಕ್ಕೆ ಬೆ0ಭಲಸೂಚಿಸಿದ್ದಾರೆ

ಅಖಿಲ ಭಾರತೀಯ ಕೋಲಿ ಸಮಾಜ ನವದೆಹಲಿ ಕರ್ನಾಟಕ ರಾಜ್ಯ ಘಟಕದ ವತಿಯಿಂದ ದಿನಾಂಕ 20/21-12-2025 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಭೆ ಹಾಗೂ ಬೃಹತ ಸಮಾವೇಶ ಅತ್ಯಂತ ಯಶಸ್ವಿಯಾಗಲು ಕಾರಣಿಭೂತರಾದ ಕರ್ನಾಟಕ ರಾಜ್ಯದ ಕೋಲಿ /ಕಬ್ಬಲಿಗಾ ಸಮಾಜದವರಿಗೆ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ದತ್ತಾತ್ರೇಯರಡ್ಡಿ ಹಾಗೂ ಪದಾಧಿಕಾರಿಗಳು ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿ ನಾಳೆ ನೆಡೆಯಲಿರುವ ಕೋಲೀ ಕಬ್ಬಲಿಗ ಎಸ್ಟಿ ಹೋರಾಟಕ್ಕೆ ಬೆಭಲ ಸೂಚಿಸಿದ್ದಾರೆ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರದ ಮಾಜಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ಭಾನುಪ್ರತಾಪ ಸಿಂಗ್ ವರ್ಮಾ, ಸಂಸದರಾದ ಸನ್ಮಾನ್ಯ ಶ್ರೀ ಇಠಲ್ ರಾಜೇಂದ್ರ ಹಾಗೂ ಮಾಜಿ ಸಂಸದರಾದ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ವಿರೇಂದ್ರ ಕಶಪ್, ಮಾಜಿ ಸಂಸದರಾದ ಶ್ರೀ ಸತ್ಯನಾರಾಯಣ ಪವಾರ, ಮಾಜಿ ವಿಧಾನ ಸಭೆ ಸದಸ್ಯರಾದ ಶ್ರೀ ಹರಿಶಂಕರ ಮಾಹೋರ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾದ ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ, ಸನ್ಮಾನ್ಯ ಶ್ರೀ ಡಾ|| ಸಾಯಿಬಣ್ಣ ತಳವಾರ ಹಾಗೂ ನಿಗಮ ಮಂಡಳಿಯ ಅಧ್ಯಕ್ಷರಾದ ಶ್ರೀ ಗಂಗಾಧರ, ಶ್ರೀಮತಿ ಮಾಲಾ ಬಿ. ನಾರಾಯಣರಾವ, ಮಾಜಿ ಸಚಿವರಾದ ದೇವಿಂದ್ರ ಘಾಳಪ್ಪಾ ರವರ ಸುಪುತ್ರರಾದ ಅನಿಲ ಜಮಾದಾರ, ಶ್ರೀ ಹಣಮಂತಪ್ಪಾ ಗಣಾಪೂರ, ಶ್ರೀ ಭೀಮಣ್ಣ ಸಾಲಿ, ಸರ್ವೋಚ್ಛ ನ್ಯಾಯಾಲಯದ ಖ್ಯಾತ ನ್ಯಾಯಾವಾದಿಗಳು ಡಾ॥ ಸಂಗೀತಾ ನವದೆಹಲಿ, ಆಂಧ್ರಪ್ರದೇಶದ ವಾರಂಗಲ ಜಿಲ್ಲೆಯ ಪ್ರಾಂಶುಪಾಲರಾದ ಶ್ರೀ ಸತೀಶ ಮುದ್ದಿರಾಜ್, ಶ್ರೀ ಆರ್. ಭೂತಪತಿ, ಶ್ರೀ ರಾಜ್ಯಗೋಪಾಲರೆಡ್ಡಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು, ಶ್ರೀ ದತ್ತರಾಜ್ ಕಿನ್ನೂರ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು ಮಹಾರಾಷ್ಟ್ರ ಮತ್ತು ಹಾಲಿ ಹಾಗೂ ಮಾಜಿ ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು ನಂತರ ಅಖಿಲ ಭಾರತೀಯ ಕೋಲಿ ಸಮಾಜದ ಪ್ರಮುಖ ನಾಯಕರ ನಿಯೋಗ ಹಾಗೂ ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ನಿಯೋಗ ಗೌರವನ್ವಿತ ರಾಜ್ಯಪಾಲರಿಗೆ ಹೊಸದಾಗಿ ಎಸ್.ಟಿ ಪಟ್ಟಿಗೆ ಸೇರಿಸುವ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!