ಮಣಿಕಂಟ ಆಶ್ರಮದ 40 ನೇ ವರ್ಷದ ಪಡಿಪೂಜೆ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು ಎಂದು ಗುರುಸ್ವಾಮಿ ದೇವಿಂದ್ರ ಸುಣಗಾರ ತಿಳಿಸಿದರು ಸೇಡಂ ಪಾಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಮಣಿಕಂಟ ಆಶ್ರಮದ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಗುರುಸ್ವಾಮಿ ದೇವಿಂದ್ರ ಸುಣಗಾರ ನೇತೃತ್ವದಲ್ಲಿ ನಿರಂತರವಾಗಿ 40 ವರ್ಷದಿಂದ ಪಡಿಪೂಜೆ ಕಾರ್ಯಕ್ರಮ ಆಚರಿಸುತ್ತಾ ಬಂದಿದೆ ಎಂದು ಗುರುಸ್ವಾಮಿ ದೇವಿಂದ್ರ ಸುಣಗಾರ ತಿಳಿಸಿದರು.ಶನಿವಾರ ಸಾಯಂಕಾಲ 7-00 ಗಂಟೆಗೆ ಭಜನೆಯೊಂದಿಗೆ ಪೂಜೆ ಪ್ರಾರಂಭವಾಗಿ 8-00 ಗಂಟೆಗೆ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ಅಭಿಷೇಕ ದೊಂದಿಗೆ ಪಡಿಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು ಎಂದು ತಿಳಿಸಿದರು.ಇದೆ ವೇಳೆ 18 ನೇ ವರ್ಷದ ಶಬರಿಮಲೆ ಯಾತ್ರೆಗೆ ಕೈಗೊಳ್ಳುತ್ತಿರುವ ವೆಂಕಟೇಶ ಪಾಟೀಲ ಗುರುಸ್ವಾಮಿಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ದಂಪತಿಗಳು ಸನ್ಮಾನಿಸಿ ಗೌರವಿಸಿದರು.ಪಡಿಪೂಜೆ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು,ಪುರುಷರು ಭಾಗವಹಿಸಿ ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡದುಕೊಂಡರು. ಈ ಸಂದರ್ಭದಲ್ಲಿ ಶರಣಪ್ಪ ಮೆಕಾನಿಕ್ ಗುರುಸ್ವಾಮಿ, ಮಲ್ಲುಗುರುಸ್ವಾಮಿ, ರಂಗಾ ಗುರುಸ್ವಾಮಿ, ಮಹೇಶರೆಡ್ಡಿ ಗುರುಸ್ವಾಮಿ ಜಾಕನಪಲ್ಲಿ, ಅಭಿಷೇಕ ಗುರುಸ್ವಾಮಿ , ಇನ್ನೂಳಿದ ಗುರುಸ್ವಾಮಿಗಳು ಉಪಸ್ಥಿತರಿದ್ದರುಬಂದಂತ ಸರ್ವ ಭಕ್ರರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು





