ಬೆಳೆಹಾನಿ ಪರಿಹಾರ ನೀಡುವಲ್ಲಿ ಅವೈಜ್ಞಾನಿಕ ವಾಗಿದ್ದು ಎಂದು ಜೆಡಿಎಸ್ ತಾಲೂಕಾ ಅದ್ಯಕ್ಷ ವೆಂಕಟರೆಡ್ಡಿ ಪಾಟೀಲ ಗಾಡದಾನ ಆರೋಪಿಸಿದ್ದಾರೆ ಸೇಡಂ ತಾಲೂಕಿನಲ್ಲಿ ಅತಿವೃಷ್ಟಿ ಅನಾವೃಷ್ಠಿಯಿಂದ ಬಹುತೇಕ ರೈತರ ಬೆಳೆಹಾನಿಯಾಗಿ ಸಂಕಷ್ಟದಲ್ಲಿದ್ದಾರೆ ಅಧಿಕ ಜನ ರೈತರಿಗೆ ಬೆಳೆಹಾನಿ ಪರಿಹಾರ ದೊರಕಿಲ್ಲ ಎಂದು ಜೆಡಿಎಸ್ ತಾಲೂಕಾ ಅದ್ಯಕ್ಷ ವೆಂಕಟರೆಡ್ಡಿ ಪಾಟೀಲ ಗಾಡದಾನ ಆರೋಪಿಸಿದ್ದಾರೆ. ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕಲಬುರಗಿ ಗೆ ಬಂದಾಗ ಬೆಳೆಹಾನಿ ಕಳೆದುಕೊಂಡ ರೈತರ ಖಾತೆಗೆ ಪರಹಾರ ಜಮೆಯಾಗುತ್ತದೆ ಎಂದು ಹೇಳಿದರು ಆದರೆ ಗ್ರಾಮಗಳಲ್ಲಿ ಬಹುತೇಕ ರೈತರಿಗೆ ಬೆಳೆಹಾನಿ ಪರಿಹಾರ ದೊರಕಿಲ್ಲ ತಾಲೂಕಿನಲ್ಲಿ ಸರಿ ಸುಮಾರು 95_ಸಾವಿರ ರೈತರಿದ್ದಾರೆ ಗ್ರಾಮೀಣ ಭಾಗದಲ್ಲಿ ಬೆಳೆಹಾನಿ ಸಮೀಕ್ಷೆ ಅವೈಜ್ನಾನಿಕವಾಗಿದ್ದು ಸರಿಯಾದ ರೀತಿಯಲ್ಲಿ ಸಮೀಕ್ಷೆ ಆಗಿಲ್ಲ ರೈತರು ತಮ್ಮ ಹೊಗಳಲ್ಲಿ ತೊಗರಿ ಬೆಳೆ ಎಂದು ಹೇಳಿದರೂ ಸಮೀಕ್ಷೆ ಯಲ್ಲಿ ಭತ್ತ ಎಂದು ತೋರಿಸಿದ್ದಾರೆ ಕೆಲವು ರೈತರಿಗೆ ಬ್ಯಾಂಕ್ ಖಾತೆಗೆ ಪರಿಹಾರ ಧನ ಜಮೆಯಾದರೂ ರೈತರು ಪರಿಹಾರ ಕೊಡಲು ಕೇಳಿದಾಗ ನಿಮ್ಮ ಮೊದಲಿನ ಸಾಲವಿದೆ ಎಂದು ಉತ್ತರ ಕೊಟ್ಟು ವಾಪಸ್ ಕಳಿಸುತ್ತಿದ್ದಾರೆ ಹೀಗಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ ಈಗಾಗಲೇ ಸಂಬಂದ ಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇವೆ ಬರುವ ದಿನಗಳಲ್ಲಿ ಬೆಳೆಹಾನಿ ಪರಿಹಾರ ಖಾತೆಗೆ ಜಮೆಯಾಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೆಡ್ಡಿ ಗೋಟೂರು, ಜೆಡಿಎಸ್ ಮುಖಂಡ ಗೋವರ್ಧನ ರೆಡ್ಡಿ, ರೈತ ಮುಖಂಡ ಮದನ ಮೋಹನರೆಡ್ಡಿ ತೊಲಮಾಮಡಿ ಇದ್ದರು ಶರಣಪ್ಪ ಎಳ್ಳಿ ssvtv news ಸೇಡಂ
ಬೆಳೆಹಾನಿ ಪರಿಹಾರ ನೀಡುವಲ್ಲಿ ಅವೈಜ್ಞಾನಿಕ; ವೆಂಕಟರೆಡ್ಡಿ ಆರೋಪ
ಬೆಳೆಹಾನಿ ಪರಿಹಾರ ನೀಡುವಲ್ಲಿ ಅವೈಜ್ಞಾನಿಕ; ವೆಂಕಟರೆಡ್ಡಿ ಆರೋಪ





