ಥೈಲ್ಯಾಂಡ್ ನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಿಟ್ಟಿಸಿಕೊಂಡ ಅಂತಾರಾಷ್ಟ್ರೀಯ ಕ್ರೀಡಾಪಟು ಕುಮಾರ್ ರಾಠೋಡ ಗೆ ಅಲ್ಲಿಪುರ ದೊಡ್ಡ ತಾಂಡಾದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ನವೆಂಬರ್ 21 ರಂದು ಥೈಲ್ಯಾಂಡ್ ನಲ್ಲಿ ವರ್ಲ್ಡ್ ಎಬಿಲಿಟಿ ಕ್ರೀಡಾ ಸ್ಪರ್ಧೆಯಲ್ಲಿ ಯಾದಗಿರಿ ತಾಲೂಕಿನ ಅಲ್ಲಿಪುರ ದೊಡ್ಡ ತಾಂಡಾದ ಗ್ರಾಮೀಣ ಕ್ರೀಡಾಪಟು ಕುಮಾರ್ ರಾಠೋಡ ಭಾಗಿಯಾಗಿ ಡಿಸ್ಕಸ್ ಥ್ರೋದಲ್ಲಿ ಭಾಗಿಯಾಗಿ ಚಿನ್ನದ ಪದಕ ಗೆದ್ದು ವಿಶ್ವ ಮಟ್ಟದಲ್ಲಿ ಯಾದಗಿರಿ ಜಿಲ್ಲೆಯ ಕೀರ್ತಿ ತಂದಿದ್ದರು.ಈ ಹಿನ್ನಲೆ ಕುಮಾರ್ ರಾಠೋಡ ಅವರ ಹುಟ್ಟುರಿನಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಥೈಲ್ಯಾಂಡ್ ಗೆ ತೆರಳಲು ಇಲಾಖೆಯಿಂದ ಆರ್ಥಿಕ ಸಹಾಯ ಮಾಡಲು ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಪಂಚಾಯತ ಸಿಇಓ ಲವೀಶ್ ಒರಡಿಯಾ ಅವರಿಗೆ ಗ್ರಾಮಸ್ಥರು ಸನ್ಮಾನಿಸಿದರು.ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಆರ್ಥಿಕ ಸಹಾಯ ನೆನೆದು ಕ್ರೀಡಾಪಟು ಕಣ್ಣೀರಾದರು.ಕುಮಾರ್ ರಾಠೋಡಗೆ ಜಿಲ್ಲಾ ಪಂಚಾಯತ ಸಿಇಓ ಲವೀಶ್ ಒರಡಿಯಾ ಅವರು ಕ್ರೀಡಾ ಬಟ್ಟೆಗಳನ್ನು ವಿತರಣೆ ಮಾಡಿದರು ಕ್ರೀಡಾ ಪಟುವಿನ ಸಾಧನೆಗೆ ಜಿಲ್ಲಾ ಪಂಚಾಯತ ಸಿಇಓ ಲವೀಶ್ ಒರಡಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಚಿನ್ನದ ಪದಕ ಪಡೆದ ಅಂತಾರಾಷ್ಟ್ರೀಯ ಕ್ರೀಡಾಪಟುಗೆ ಸನ್ಮಾನ
ಚಿನ್ನದ ಪದಕ ಪಡೆದ ಅಂತಾರಾಷ್ಟ್ರೀಯ ಕ್ರೀಡಾಪಟುಗೆ ಸನ್ಮಾನ





