ಉತ್ತರ ಕರ್ನಾಟಕ ಹೋರಾಟ ಸಮಿತಿ ಬಾಗಲಕೋಟೆ. ಜಿಲ್ಲಾ ಘಟಕ: ಕಲಬುರ್ಗಿಮಾಧ್ಯಮಗೋಷ್ಠಿ ಮತ್ತೊಂದು ಸಮೃದ್ಧ ಕನ್ನಡ ನಾಡು ನಿರ್ಮಾಣಕ್ಕೆ ಕೈಜೋಡಿಸಿ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಒಗ್ಗೂಡಿಸಿ 15 ಜಿಲ್ಲೆಗಳ ಸಮೃದ್ಧ ಉತ್ತರ ಕರ್ನಾಟಕ ನಿರ್ಮಾಣ ಮಾಡಬೇಕಾಗಿದೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಬಾಗಲಕೋಟೆ. ಜಿಲ್ಲಾ ಘಟಕ: ಕಲಬುರ್ಗಿಮಾಧ್ಯಮಗೋಷ್ಠಿ ನಮ್ಮ ಭಾಗದ ಸರ್ವಜನರ ಸುಖ, ಸಮೃದ್ಧಿ, ಸ್ವತಂತ್ರ, ಸಮಾನತೆ, ಸ್ವಾಭಿಮಾನಕ್ಕಾಗಿ ಪ್ರತ್ಯೇಕ ರಾಜ್ಯ ರಚನೆ ಅವಶ್ಯ ಮತ್ತು ಅನಿವಾರ್ಯ. ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುವ ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಯುತ ರಾಜು ಕಾಗೆಯವರ ಪ್ರತ್ಯೇಕತೆಯ ಕೂಗಿಗೆ ಸುಮಾರು 26 ಜನ ಶಾಸಕರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ. ಇನ್ನೂ ಈ ಭಾಗದ ಎಲ್ಲ ಶಾಸಕರು ಬೆಂಬಲಿಸಬೇಕು. ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ತಾರತಮ್ಯ, ಅನ್ಯಾಯ, ಮಲತಾಯಿ ಧೋರಣೆ ಮುಂದುವರೆದಿದೆ. ನಮ್ಮ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾಗಿರುವುದು ನಮ್ಮ ದುರ್ದೈವದ ಸಂಗತಿ. 371 (ರಿ) ವಿಶೇಷ ಸ್ಥಾನಮಾನ ವೈಜನಾಥ್ ಪಾಟೀಲ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿದಾಗ ಖರ್ಗೆ ಅವರ ರಾಜಕೀಯ ಪ್ರಯತ್ನದಿಂದ ದೊರೆಯಿತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೋರಾಡಬೇಕಾಯ್ತು. ಅನುದಾನಕ್ಕೆ ಹೋರಾಡಬೇಕು. ಪ್ರತ್ಯೇಕ ರಾಜ್ಯ ಆದಮೇಲೂ ಉಳಿದ ರಾಜ್ಯಗಳಲ್ಲಿ ಇರುವಂತೆ 371(ರಿ) ಸೌಲಭ್ಯ ಕೇಂದ್ರ ಸರಕಾರದಿಂದ ಮುಂದುವರೆಯುತ್ತದೆ. ಪ್ರತ್ಯೇಕ ರಾಜ್ಯ ಆದರೆ ಕಲ್ಯಾಣ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ರಾಜಕೀಯ ಕ್ಷೇತ್ರದಲ್ಲಿ ನಮ್ಮ ಭಾಗದವರಿಗೆ ಪ್ರಾಮುಖ್ಯತೆ, ಸಮಾನತೆ ಇಲ್ಲದ ಕಾರಣ ನಮ್ಮ ಭಾಗ ಹಿಂದೆ ಉಳಿದಿದೆ. ಎಲ್ಲ ಪಕ್ಷಗಳ ಅಧ್ಯಕ್ಷರು ದಕ್ಷಿಣದವರೆ, ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅವರೇ, ವಿರೋಧ ಪಕ್ಷದ ನಾಯಕರೂ ಅವರೇ, ಎಲ್ಲ ಸಂಘಟನೆಗಳ ಅಧ್ಯಕ್ಷರೂ ಆವರೇ, ವಿಧಾನಸೌಧದ ಎಲ್ಲ ಅಧಿಕಾರಿಗಳೂ ದಕ್ಷಿಣದವರೆ ಇದ್ದಾಗ ಉತ್ತರ ಕರ್ನಾಟಕದವರಿಗೆ ನ್ಯಾಯ ಸಿಗಲು ಸಾಧ್ಯವೇ? ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ತಾರತಮ್ಯ ಆಗಿದೆ. 71 ಜನರಲ್ಲಿ ಕೇವಲ 21 ಜನ ಉತ್ತರ ಕರ್ನಾಟಕದವರಿಗೆ ಪ್ರಶಸ್ತಿ. ಮಾಧ್ಯಮ ಕ್ಷೇತ್ರದ 4 ಜನರಲ್ಲಿ ಒಬ್ಬ ಉತ್ತರ ಕರ್ನಾಟಕ ಭಾಗದವರಿಗೂ ಪ್ರಶಸ್ತಿ ಕೊಟ್ಟಿಲ್ಲ ನಮ್ಮ ಭಾಗದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯ ಅವಶ್ಯ ಮತ್ತು ಅನಿವಾರ್ಯವಾಗಿ
ಉತ್ತರ ಕರ್ನಾಟಕ ಹೋರಾಟ ಸಮಿತಿ ಬಾಗಲಕೋಟೆ. ಜಿಲ್ಲಾ ಘಟಕ: ಮಾಧ್ಯಮಗೋಷ್ಠಿ
ಉತ್ತರ ಕರ್ನಾಟಕ ಹೋರಾಟ ಸಮಿತಿ ಬಾಗಲಕೋಟೆ. ಜಿಲ್ಲಾ ಘಟಕ: ಮಾಧ್ಯಮಗೋಷ್ಠಿ





