Google search engine
ಮನೆUncategorizedಕರ್ನಾಟಕದ ಹಲವಾರು ಜನಸಮುದಾಯಗಳನ್ನು ಸಂಘಟಿಸುತ್ತಿರುವ ಡಿಜಿಟಲ್ ಮಾಧ್ಯಮಅದಕ್ಕೀಗ ಮೂರು ವರ್ಷ ದಾಟಿದೆ

ಕರ್ನಾಟಕದ ಹಲವಾರು ಜನಸಮುದಾಯಗಳನ್ನು ಸಂಘಟಿಸುತ್ತಿರುವ ಡಿಜಿಟಲ್ ಮಾಧ್ಯಮಅದಕ್ಕೀಗ ಮೂರು ವರ್ಷ ದಾಟಿದೆ

ಕರ್ನಾಟಕದ ಹಲವಾರು ಜನಸಮುದಾಯಗಳನ್ನು ಸಂಘಟಿಸುತ್ತಿರುವ ಡಿಜಿಟಲ್ ಮಾಧ್ಯಮಅದಕ್ಕೀಗ ಮೂರು ವರ್ಷ ದಾಟಿದೆ

ಕರ್ನಾಟಕದ ಹಲವಾರು ಜನಸಮುದಾಯಗಳನ್ನು ಸಂಘಟಿಸುತ್ತಿರುವ ಜನಸಂಘಟನೆಗಳೊಳಗಿಂದ ಮೂಡಿಬಂದ ಡಿಜಿಟಲ್ ಮಾಧ್ಯಮ. ಅದಕ್ಕೀಗ ಮೂರು ವರ್ಷ ದಾಟಿದೆ. ರಾಜ್ಯದೆಲ್ಲೆಡೆ ವಿಸ್ತಾರವಾದ ಬಳಗ ಮತ್ತು ಮಾಧ್ಯಮ ಕಾರ್ಯಕರ್ತರ ದಂಡನ್ನು ಹೊಂದಿರುವ ಈ ಸಮುದಾಯ ಮಾಧ್ಯಮವು ಕೆಲವು ಪ್ರಯೋಗಗಳನ್ನು ಮಾಡುತ್ತಾ, ಉಳಿದ ಮಾಧ್ಯಮಗಳಿಗಿಂತ ಭಿನ್ನವಾದ ದಾರಿ ತುಳಿಯಲು ಯತ್ನಿಸಿದೆ. ಹಲವು ಸವಾಲುಗಳ ನಡುವೆ ಒಂದು ಚೌಕಟ್ಟನ್ನು ಕಟ್ಟಿಕೊಳ್ಳಲು ಈ ಮೂರು ವರ್ಷ ಬೇಕಾಯಿತು ಈ ಸಂದರ್ಭದಲ್ಲಿ ಕಲಬುರಗಿಯಲ್ಲಿ ಓದುಗರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಮಾತ್ರ ಎಂದೂ ನಮ್ಮ ಆದ್ಯತೆಯಾಗಿರಲಿಲ್ಲ. ಸತ್ಯ-ನ್ಯಾಯ-ಪ್ರೀತಿ ಮೌಲ್ಯಗಳಿಗೆ ಬದ್ಧವಾಗಿರುವ ಸಮಸ್ತ ಕರ್ನಾಟಕದ ಜನ ಮಾಧ್ಯಮ ಇದಾಗಿರಬೇಕೆಂಬುದೇ ಆಶಯ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿರುವುದು ಮಾತ್ರವಲ್ಲದೇ, ಕಲ್ಯಾಣ ಕರ್ನಾಟಕದ ಶ್ರೀಮಂತ ಚರಿತ್ರೆ, ಸಂಸ್ಕೃತಿ, ಅಭಿವೃದ್ಧಿಯ ರಾಜಕಾರಣ ಹಾಗೂ ಮುಂದಿನ ದಿನಗಳತ್ತ ನೋಟ ಎಲ್ಲವೂ ಕಾರ್ಯಕ್ರಮದ ಭಾಗವಾಗಿರಲಿದೆ. ಕಲ್ಯಾಣ ಕರ್ನಾಟಕದ ಹಿರಿಮೆ, ಒಳಿತು, ಸಮಸ್ಯೆ, ಪರಿಹಾರಗಳ ಕುರಿತು ‘ಚಿಂತಿಸಿದ ಹಲವಾರು ಚಿಂತಕರು ಮಾತನಾಡಲಿದ್ದಾರೆ. ಈ ಭಾಗದ ವಿಶಿಷ್ಟ ಕಲಾಪ್ರಕಾರಗಳನ್ನೂ ನಿಮ್ಮ ಮುಂದಿಡುವ ಪ್ರಯತ್ನ ಇರಲಿದೆ ನವೆಂಬರ್ 30ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಎಸ್ಎಮ್. ಪಂಡಿತ ರಂಗ ಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಈದಿನ.ಕಾಮ್ ಹೊರತರುತ್ತಿರುವ “ಜೈ ಹಿಂದ್-ಜಯ ಕರ್ನಾಟಕ” ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಇತಿಹಾಸ-ಸಂಸ್ಕೃತಿಯ ಸಂವಾದ ಕಾರ್ಯಕ್ರಮ ರಾಜ್ಯದ ಪ್ರಮುಖ ವ್ಯಕ್ತಿತ್ವಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಸಮಾರಂಭದಲ್ಲಿ ಈದಿನ ಸಮುದಾಯ ವಿಭಾಗದ ಮುಖ್ಯಸ್ಥರಾದ ಡಾ.ವಾಸು ಎಚ್ ವಿ ಅವರ ಪ್ರಾಸ್ತಾವಿಕ ನುಡಿಗಳ ನಂತರ, ವಿಶೇಷ ಸಂಚಿಕೆಯನ್ನು ಐಟಿಬಿಟಿ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆ ಮಾಡಲಿದ್ದಾರೆ. ‘ನ್ಯೂಸ್ ಮಿನಿಟ್’ ಸಂಪಾದಕಿ ಧನ್ಯಾ ರಾಜೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ‘ದಿ ವೈರ್’ನ ಹಿರಿಯ ಪತ್ರಕರ್ತೆ ಆರಫಾ ಖಾನಂ ಶೇರ್ವಾನಿ ಅವರು ವಿಶೇಷ ಶುಭ ಸಂದೇಶ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ ಮರಿಯಪ್ಪ ಹಳ್ಳಿ ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಶಾಸಕರಾದ ಖನಿಜಾ ಫಾತಿಮಾ, ಅಲ್ಲಮ ಪ್ರಭು ಪಾಟೀಲ, ಮಹಾಪೌರರಾದ ವರ್ಷಾ ರಾಜು ಚಾನೆ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷರಾದ ಅರುಣಕುಮಾರ ಎಮ್. ವೈ. ಪಾಟೀಲ, ಜೇಸ್ಕಾಂ ಅಧ್ಯಕ್ಷರಾದ ಪ್ರವೀಣ ಹರವಾಳ, ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥರಾದ ಡಾ॥ ಫಾರೂಕ್ ಮಣ್ಣೂರ ಅರ್ಜುನ ಭದ್ರೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಉಪಸ್ತಿತರಿರುವರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!