ಕರ್ನಾಟಕ ರಾಜ್ಯ ದಲ್ಲಿತ ಸಂಘರ್ಷ ಸಮಿತಿ ಆರ್.ಎಸ್.ಎಸ್. ಕಾನೂನ ಬಾಹಿರ ನಡೆಯನ್ನು ವಿರೋಧಿಸಿ ಸರಕಾರ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಅನುಷ್ಟಾನಕರಾದ ಶ್ರೀ ಪ್ರಿಯಾಂಕ ಖರ್ಗೆ ಅವರನ್ನು ಬೆಂಬಲಿಸಿ ಅವರಿಗೆ ಅವರ ‘ಪ್ರಜಾಪ್ರಭುತ್ವ ಸಂವಿಧಾನದ ಕುಟುಂಬಕ್ಕೆ ಸೂಕ್ತ ರಕ್ಷಣೆ ನಿಡಬೇಕೆಂದು ಒತ್ತಾಯಿಸಿ ಮೆರವಣಿಗೆ ಕೇಂದ್ರದಲ್ಲಿ ಮನುವಾದಿಗಳು ಅಧಿಕಾರಕ್ಕೆ ಬಂದ ತರುವಾಯದಲ್ಲಿ ದಿನೇದಿನೇ ದಲಿತ ಸಮುದಾಯದ ಮೇಲಿನ ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರಗಳು ಉಲ್ಬಣಿಸುತ್ತಿವೆ. ದಲಿತ ಸಮುದಾಯವನ್ನು ಸಾಮಾಜಿಕವಾಗಿ, ರಾಜಕೀಯವಾಗಿ. ಶೈಕ್ಷಣಿಕವಾಗಿ ವ್ಯವಸ್ಥಿತವಾಗಿ ಸದೆಬಡೆಯಲಾಗುತ್ತಿದೆ. ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಸಿ.ಜೆ.ಐ. ಬಿ.ಆರ್. ಗವಾಯಿ ಅವರ ಮೇಲೆ ಮನುವಾದಿ, ಜಾತಿವಾದಿ ಮಂತಾಂಧ ವಕೀಲನೊಬ್ಬ ಶೂ ಎಸೆಯುವ ಮೂಲಕ ದೇಶದ್ರೋಹಿ ಕೃತ್ಯ ಎಸೆಗಿದ್ದಾನೆ. ಇದು ಒಂದು ರೀತಿಯಲ್ಲಿ ಭಾರತದ ಸಂವಿಧಾನ. ಪ್ರಜಾಪ್ರಭುತ್ವದ ಮೇಲೆ ನೇರ ದಾಳಿಯಾಗಿದೆ. ದಲಿತರು ಉನ್ನತ ಹುದ್ದೆಯಲ್ಲಿರುವುದನ್ನು ಮನುವಾದಿಗಳು ಸಹಿಸುವುದಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಕೋಮುವಾದಿ ಮನಸ್ಥಿತಿಯ ವಕೀಲನೊಬ್ಬ ಸಾರ್ವಜನಿಕವಾಗಿ ಡಾ. ಬಾಬಾಸಾಹೇಬರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತ, ಅವರು ಸಂವಿಧಾನವನ್ನೇ ಬರೆದಿಲ್ಲ ಎಂದು ರಾಷ್ಟ್ರ ವಿರೋಧ ಮಾತುಗಳನ್ನಾಡಿದ್ದಾನೆ
ಪ್ರಿಯಾಂಕ ಖರ್ಗೆ ಅವರನ್ನು ಬೆಂಬಲಿಸಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನಿಡಬೇಕೆಂದು ರಾಜ್ಯ ದಲ್ಲಿತ ಸಂಘರ್ಷ ಸಮಿತಿ ಒತ್ತಾಯ
ಪ್ರಿಯಾಂಕ ಖರ್ಗೆ ಅವರನ್ನು ಬೆಂಬಲಿಸಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನಿಡಬೇಕೆಂದು ರಾಜ್ಯ ದಲ್ಲಿತ ಸಂಘರ್ಷ ಸಮಿತಿ ಒತ್ತಾಯ





