ಬೆಂಗಳೂರಿನ ರಸ್ತೆ ಗುಂಡಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ: ವಿಧಾನಸೌಧದ ಮುಂಭಾಗದಲ್ಲೇ ಹೊಂಡಮಯ! ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಸ್ಥಿತಿ ಪೂರ್ಣ ಪ್ರಮಾಣದಲ್ಲಿ ಸರಿ ಹೋಗಿಲ್ಲ. ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳು ವ್ಯಾಪಕವಾಗಿ ಕಾಣಿಸಿಕೊಂಡಿದ್ದವು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗಡುವಿನ ಮೇಲೆ ಗಡುವು ನೀಡಿದ್ದರು. ಆದರೆ ಗಡುವು ದಿನಾಂಕಕಷ್ಟೇ ಸೀಮಿತವಾಗಿದೆ. ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಆಡಳಿತ ಸೌಧ ಅಂದರೆ ವಿಧಾನಸೌಧದ ಮುಂದೆಯೇ ರಸ್ತೆಯಲ್ಲಿ ಹೊಂಡ ಕಾಣಿಸಿಕೊಂಡಿದೆಕಳೆದ ಒಂದು ತಿಂಗಳಿಂದ ವಿಧಾನಸೌಧದ ಮುಂಭಾಗದಲ್ಲಿ ರಸ್ತೆ ಗುಂಡಿ ಇದೆ. ಇದಕ್ಕೆ ಬ್ಯಾರಿಕೇಡ್ ಹಾಕಲಾಗಿದೆ. ಇದರ ಪರಿಣಾಮವಾಗಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗುತ್ತಿದೆ. ವಿಧಾನಸೌಧದ ಮೆಟ್ರೋ ನಿಲ್ದಾಣದ ಸಿಗ್ನಲ್ ನಲ್ಲಿ ದೊಡ್ಡ ಗುಂಡಿ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರವಾಸ ಆದರೂ ರಸ್ತೆ ಗುಂಡಿಗೆ ಮುಕ್ತಿ ದೊರಕಿಲ್ಲಇದೊಂದೇ ಅಲ್ಲ, ಬೆಂಗಳೂರಿಗೆ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳಿಗೆ ಪೂರ್ಣ ಮುಕ್ತಿ ಸಿಕ್ಕಿಲ್ಲ. ಕೆಲವು ಕಡೆ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ ಇನ್ನೂ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳು ಹಾಗೆಯೇ ಇವೆ. ಅವುಗಳನ್ನು ಮುಚ್ಚಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ
ಬೆಂಗಳೂರಿನ ರಸ್ತೆ ಗುಂಡಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ: ವಿಧಾನಸೌಧದ ಮುಂಭಾಗದಲ್ಲೇ ಹೊಂಡಮಯ!
ಬೆಂಗಳೂರಿನ ರಸ್ತೆ ಗುಂಡಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ: ವಿಧಾನಸೌಧದ ಮುಂಭಾಗದಲ್ಲೇ ಹೊಂಡಮಯ!





