ರಾಜ್ಯದಲ್ಲಿ 28 ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲಿವು ಖಚಿತ ಎಂದ ವಿರೋಧ ಪಕ್ಷದ ನಾಯಕ ಆರ್ ಅಶೋಕ್
ಚಿಂಚೋಳಿ ಪಟ್ಟಣದಲ್ಲಿರುವ ಡಾ ಅವಿನಾಶ್ ಜಾಧವ ಅವರ ನಿವಾಸದಲ್ಲಿ ಹಮ್ಮಿಕೊಂಡಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯಕ್ಕೆ ಬರಗಾಲ ಬಂದಿದ್ದೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಕಾಂಗ್ರೆಸ್ ಸರಕಾರ ವಿರುದ್ಧ ಹರಿಹಾಯ್ದರು.
ಗ್ಯಾರಂಟಿಗಳ ಹೆಸರಲ್ಲಿ ರಾಜ್ಯ ದಿವಾಳಿಯತ್ತ ಸಾಗಿದೆ, ಮತದಾರರು ಮೋದಿಯವರ ಸಾಧನೆಗಳನ್ನು ಮನಕಂಡು 28 ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲಿಸುವ ಭರವಸೆ ತಮಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬೀದರ್ ಅಭ್ಯರ್ಥಿ ಸಂಸದರು ಭಗವಂತ ಖುಬಾ, ಶಾಸಕರಾದ ಅವಿನಾಶ್ ಜಾಧವ ಇನ್ನಿತರರು ಇದ್ದರು.