Google search engine
ಮನೆUncategorizedಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಚಂದನ್ ಶೆಟ್ಟಿ ರ್ಯಾಪ್ ಹಾಡು ಶೂಟ್

ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಚಂದನ್ ಶೆಟ್ಟಿ ರ್ಯಾಪ್ ಹಾಡು ಶೂಟ್

ಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಚಂದನ್ ಶೆಟ್ಟಿ ರ್ಯಾಪ್ ಹಾಡು ಶೂಟ್ ಮಾಡುತ್ತಿದ್ದಾರೆ ರ್ಯಾಪರ್ ಚಂದನ್ ಶೆಟ್ಟಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ʻಯೂನಿವರ್ಸಲ್ ಬಾಸ್ʼ ಕ್ರಿಸ್ ಗೇಲ್ ಕೈ ಜೋಡಿಸಿದ್ದಾರೆ. ಹೌದು.. ಈ ಕೊಲ್ಯಾಬೋರೇಷನ್ ಬಗ್ಗೆ ಕ್ರಿಸ್ ಗೇಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಚಂದನ್ ಶೆಟ್ಟಿಯನ್ನು ʻರಾಕ್ ಸ್ಟಾರ್ʼ ಎಂದು ಕರೆದು ಪರಿಚಯಿಸಿದ್ದಾರೆ. ಚಂದನ್ ಶೆಟ್ಟಿ ಮಾತನಾಡಿ, “ಯೂನಿವರ್ಸಲ್ ಬಾಸ್ ಜೊತೆಗೆ ʻಲೈಫ್ ಈಸ್ ಕಸಿನೋʼ ಎಂಬ ಹಾಡನ್ನು ಮಾಡ್ತಿದ್ದೇವೆ. ನಾನಂತೂ ಸಿಕ್ಕಾಪಟ್ಟೆ ಎಕ್ಸೈಟೈಡ್ ಆಗಿದ್ದೇನೆ. ರ್ಯಾಪ್ ಭಾಗವನ್ನು ಬಾಸ್ ಅದ್ಭುತವಾಗಿ ಮಾಡಿದ್ದಾರೆ. ಅವರ ರ್ಯಾಪ್ಗೆ ನಾನು ಫ್ಯಾನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಈ ಹಾಡು ಇಷ್ಟವಾಗುವುದರಲ್ಲಿ ಸಂಶಯವಿಲ್ಲ”

. ಹಾಡುಗಳು ತಮ್ಮ ಆಕರ್ಷಕ ರ್ಯಾಪ್, ಆಧುನಿಕ ಬೀಟ್ಗಳಿಂದ ಗಮನ ಸೆಳೆಯುತ್ತವೆ. ತಮ್ಮ ಹಾಡುಗಳ ಮೂಲಕ ಯಾವಾಗಲೂ ಒಂದಲ್ಲ ಒಂದು ಪ್ರಯೋಗಗಳನ್ನ ಚಂದನ್ ಶೆಟ್ಟಿ ಮಾಡುತ್ತಲೇ ಇರುತ್ತಾರೆ. ಇದೀಗ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಚಂದನ್ ಶೆಟ್ಟಿ ರ್ಯಾಪ್ ಹಾಡು ಶೂಟ್ ಮಾಡುತ್ತಿದ್ದಾರೆ ರ್ಯಾಪರ್ ಚಂದನ್ ಶೆಟ್ಟಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ʻಯೂನಿವರ್ಸಲ್ ಬಾಸ್ʼ ಕ್ರಿಸ್ ಗೇಲ್ ಕೈ ಜೋಡಿಸಿದ್ದಾರೆ. ಹೌದು.. ಈ ಕೊಲ್ಯಾಬೋರೇಷನ್ ಬಗ್ಗೆ ಕ್ರಿಸ್ ಗೇಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಚಂದನ್ ಶೆಟ್ಟಿಯನ್ನು ʻರಾಕ್ ಸ್ಟಾರ್ʼ ಎಂದು ಕರೆದು ಪರಿಚಯಿಸಿದ್ದಾರೆ. ಚಂದನ್ ಶೆಟ್ಟಿ ಮಾತನಾಡಿ, “ಯೂನಿವರ್ಸಲ್ ಬಾಸ್ ಜೊತೆಗೆ ʻಲೈಫ್ ಈಸ್ ಕಸಿನೋʼ ಎಂಬ ಹಾಡನ್ನು ಮಾಡ್ತಿದ್ದೇವೆ. ನಾನಂತೂ ಸಿಕ್ಕಾಪಟ್ಟೆ ಎಕ್ಸೈಟೈಡ್ ಆಗಿದ್ದೇನೆ. ರ್ಯಾಪ್ ಭಾಗವನ್ನು ಬಾಸ್ ಅದ್ಭುತವಾಗಿ ಮಾಡಿದ್ದಾರೆ. ಅವರ ರ್ಯಾಪ್ಗೆ ನಾನು ಫ್ಯಾನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಈ ಹಾಡು ಇಷ್ಟವಾಗುವುದರಲ್ಲಿ ಸಂಶಯವಿಲ್ಲ” ಎಂದು ಚಂದನ್ ಶೆಟ್ಟಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ ಕ್ರಿಸ್ ಗೇಲ್ ಕೂಡ ಈ ಕೊಲ್ಯಾಬೋರೇಷನ್ ಬಗ್ಗೆ ಖುಷಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು, “ಅನಿರೀಕ್ಷಿತ ಕೊಲ್ಯಾಬ್, ಏನ್ ಗುರು ನಿನ್ ಲೆವೆಲ್, ನಾವು ಕಾದು ಕುಳಿತಿದ್ದೇವೆ” ಎಂದೆಲ್ಲಾ ಕಾಮೆಂಟ್ಗಳನ್ನು ಮಾಡಿದ್ದಾರೆ. ಚಂದನ್ ಶೆಟ್ಟಿಯ ಜನಪ್ರಿಯತೆ ಹಿಂದೆ ಅವರ ಪ್ರಯೋಗಾತ್ಮಕ ಹಾಡುಗಳು ಮತ್ತು ವಿಭಿನ್ನ ಶೈಲಿಯ ಹಾಡುಗಳಿವೆ. ʻಗಾಂಜಿʼ ಹಾಡಿನಂತಹ ಎಕ್ಸ್ಪೀರಿಮೆಂಟ್ ಹಾಡುಗಳಿಂದಿಡಿದು ʻಕಾಟನ್ ಕ್ಯಾಂಡಿʼನಂತಹ ಆಧುನಿಕ ಪಾರ್ಟಿ ಸಾಂಗ್ಗಳವರೆಗೆ, ಚಂದನ್ ಶೆಟ್ಟಿ ಕನ್ನಡಿಗರ ಮನಗೆದ್ದಿದ್ದಾರೆ.

 

ಚಂದನ್ ಶೆಟ್ಟಿ ಮತ್ತು ಕ್ರಿಸ್ ಗೇಲ್ರ ಈ ಕೊಲ್ಯಾಬೋರೇಷನ್ ಕನ್ನಡ ಸಂಗೀತಕ್ಕೆ ಒಂದು ಅಂತಾರಾಷ್ಟ್ರೀಯ ಆಯಾಮವನ್ನ ತಂದಿದೆ. ಕನ್ನಡದ ರ್ಯಾಪ್ ಹಾಡುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಈ ಪ್ರಯತ್ನವು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ʻಲೈಫ್ ಈಸ್ ಕಸಿನೋʼ ಹಾಡಿನ ರಿಲೀಸ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!