ನೀವು ಕೆಮ್ಮಿದ್ರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ! ಹೀಗಂತ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಿಚಾಯಿಸಿದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೆ ಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ವಿಚಾರವಾಗಿ ಸುನೀಲ್ ಕುಮಾರ್ ಅವರು ಡಿಕೆ ಶಿವಕುಮಾರ್ ಅವರ ಕಾಲೆಳೆದರು. ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ಕೊಡಲು ಮುಂದಾದ ಡಿಸಿಎಂ ಡಿಕೆಶಿ ಕೆಮ್ಮಿದರು. ಈ ವೇಳೆ ಎದ್ದು ನಿಂತ ಆರಗ ಜ್ಞಾನೇಂದ್ರ ನಿಮ್ಮ ಆರೈಕೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟರು. ಆರಗ ಮಾತಿಗೆ ನಾವು ‘ಆರ್ ಕೆ’ ಎಲ್ಲ ಕೊಡಲ್ಲ ಎಂದು ಡಿಕೆಶಿ ಉತ್ತರಿಸಿದರು. ಇದಕ್ಕೆ “ನಾನು ಹೇಳಿದ್ದು ಆರ್ ಕೆ ಅಲ್ಲ, ಆರೈಕೆ” ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು. “ಓಹೋ ಹೌದಾ, ಆಗಲಿ, ನಿಮ್ಮ ಅಶ್ವಥ್ ನಾರಾಯಣ್ ಹಾರೈಕೆ ನನಗೆ ಇರಲಿ” ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದರು ಈ ವೇಳೆ ಮಧ್ಯ ಪ್ರವೇಶ ಮಾಡಿದ ಸುನೀಲ್ ಕುಮಾರ್ “ನೀವು ಕೆಮ್ಮಿದ್ರೆ ಇನ್ನೂ ಯಾರು ಯಾರಿಗೆ ಅಪಾಯ ಕಾದಿದೆಯೋ” ಎಂದು ಕಿಚಾಯಿಸಿದರು. ಸುನೀಲ್ ಕುಮಾರ್ ಮಾತಿಗೆ ಸದನದಲ್ಲಿ ಸದಸ್ಯರು ನಗುವ ಮೂಲಕ ಪ್ರತಿಕ್ರಿಯಿಸಿದರು. ಆದರೆ ಡಿಕೆಶಿ ಯಾವುದೇ ರೀತಿಯಲ್ಲಿ ಇದಕ್ಕೆ ಮಾತಾಡದೇ ತಮ್ಮ ಉತ್ತರ ಮುಂದುವರಿಸಿದರು. ಶಾಸಕ ಭರಮೇಗೌಡ ಪ್ರಶ್ನೆಗೆ ಉತ್ತರ ನೀಡುವುದನ್ನು ಮುಂದುವರಿಸಿದರು. ಸದನದಲ್ಲಿ ಆನ್ಲೈನ್ ಗೇಮಿಂಗ್ ಬಗ್ಗೆ ಪಕ್ಷಾತೀತವಾಗಿ ಶಾಸಕರ ಆಕ್ರೋಶ ವ್ಯಕ್ತವಾಯ್ತು. ಶಾಸಕರ ಆಕ್ರೋಶ ಹಿನ್ನಲೆ ಅರ್ಧಗಂಟೆಗೆಯ ಚರ್ಚೆಗೆ ಅವಕಾಶ ನೀಡುವ ಭರವಸೆಯನ್ನು ಸ್ಪೀಕರ್ ಯು.ಟಿ ಖಾದರ್ ನೀಡಿದರು ಸದ್ಯ ಪ್ರಶ್ನೋತ್ತರ ನಡೆಯುತ್ತಿದೆ, ಇಷ್ಟಕ್ಕೆ ಇದು ಸೀಮಿತವಾಗಲಿ. ಅರ್ಧಗಂಟೆಯ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದರು
ನೀವು ಕೆಮ್ಮಿದ್ರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ! ಡಿಕೆ ಶಿವಕುಮಾರ್ಗ ಸುನೀಲ್ ಕುಮಾರ್ ಕಿಚಾಯಿಸಿದ ಪ್ರಸಂಗ
ನೀವು ಕೆಮ್ಮಿದ್ರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ! ಹೀಗಂತ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಿಚಾಯಿಸಿದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೆ ಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ವಿಚಾರವಾಗಿ ಸುನೀಲ್ ಕುಮಾರ್ ಅವರು ಡಿಕೆ ಶಿವಕುಮಾರ್ ಅವರ ಕಾಲೆಳೆದರು.





