ಕಳೆದ ಡಿಸೆಂಬರ್ನಲ್ಲಿ ಯಾದಗಿ ಜಿಲ್ಲೆಯ ಶಹಾಪುರ ಪಟ್ಟಣದ ಸರ್ಕಾರಿ ಗೋದಾಮಿನಿಂದ ಅನ್ನಭಾಗ್ಯ ಯೋಜನೆಯ ಆಹಾರಧಾನ್ಯ ದಾಸ್ತಾನಿನಲ್ಲಿರುವ 6,672 ಕ್ವಿಂಟಾಲ್ ಅಕ್ಕಿ ಕಳ್ಳತನದ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದಲ್ಲಿ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದು, ಇಷ್ಟು ಅಕ್ಕಿ ಕಳ್ಳತನವಾಗುವುದು ಒಂದೆರಡು ದಿನದಲ್ಲಿ ಅಸಾಧ್ಯದ ವಿಚಾರ, ಅಕ್ಕಿ ಕಳ್ಳತನದ ದೂರುದಾರ ಭೀಮರಾಯ ಮಾರ್ತಂಡಪ್ಪ ಆಗಿದ್ದು ಈತ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಾನೆ ಈ ಅಧಿಕಾರಿ ಯಾರಿಂದ ಈ ಹುದ್ದೆಗೆ ವರ್ಗಾವಣೆಯಾದ್ರು? ಇವರಿಗೆ ಕಲಬುರಗಿ ಎನ್ನುವ ಇಷ್ಟು ದೊಡ್ಡ ಜಿಲ್ಲೆಗೆ ವರ್ಗಾವಣೆ ಮಾಡಿದವರಾರು? ಈ ಕೇಸಿಗೂ ಬಿಜೆಪಿ ಮುಖಂಡ ಮಣಿಕಂಠಗೂ ಯಾವುದೇ ಸಂಬಂಧ ಇರದಿದ್ರೂ ಜೈಲಿಗೆ ಹಾಕಿದ್ರು, ಈ ಸರ್ಕಾರಿ ಕಳ್ಳನನ್ನ ಯಾವಾಗ ಜೈಲಿಗೆ ಅಟ್ಟುವವರಿದ್ದೀರಿ? ನಿಮ್ಮ ಪರ್ಸನಲ್ ಸೆಕ್ರೆಟ್ರಿ ಗಲ್ಲಾಚೋರ್, ಚಾವಲ್ಚೋರ್ಗೆ ಯಾವಾಗ ಜೈಲಿಗೆ ಅಟ್ತೀರಿ? ಬೇರೆಯವರ ಮೇಲೆ ನಲವತ್ತು ಕೇಸ್, ಮೂವತ್ತು ಕೇಸ್ ಇರುವುದರ ಬಗ್ಗೆ ನಿಮ್ಮ ಗಮನ ಇದೆ, ಈ ಚಾವಲ್ ಚೋರ್ ಕಡೆ ಗಮನ ಇಲ್ಲವಾ? ಇವರು ಕಲಬುರಗಿ ಡೆವೆಲಪ್ಮೆಂಟ್ಗೆ ಫಿಟ್ ವ್ಯಕ್ತಿನಾ? ಯಥಾ ರಾಜಾ ತಥಾ ಪ್ರಜಾ ಎನ್ನುವುದು ನಮ್ಮ ಜಿಲ್ಲೆಯಲ್ಲಿ ನಿರ್ಮಾಣ ಆಗಿದೆ ಹೀಗಾದ್ರೆ ಕಲಬುರಗಿ ಡೆವೆಲಪ್ಮೆಂಟ್ ಸಾಧ್ಯನಾ? ಎಂದು ರಾಜ್ಯದಲ್ಲಿರುವ ಆಡಳಿತ ಸರ್ಕಾರದ ವಿರುದ್ದ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಬೇರೆಯವರ ಮೇಲೆ ನಲವತ್ತು, ಮೂವತ್ತು ಕೇಸ್ ಇರುವುದರ ಬಗ್ಗೆ ಗಮನ ಇದೆ ಆದರೆ ಈ ಚಾವಲ್ ಚೋರ್ ಕಡೆ ಗಮನ ಇಲ್ಲವಾ?; ಆಂದೋಲಾ ಶ್ರೀ
RELATED ARTICLES
Recent Comments
Hello world!
ಮೇಲೆ