ಕಲಬುರಗಿ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿನ ವಿಗ್ನೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಹಮ್ಮಿಕೊಂಡ ನಾಲ್ಕನೇ ದಿನದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ೧೦೧ ಮಹಿಳೆಯರಿಗೆ ಉಡಿತುಂಬುವ ವಿಶೇಷ ಕಾರ್ಯಕ್ರಮ ಜರುಗಿತು ಆಳಂದ ರಸ್ತೆಯಲ್ಲಿನ ವಿಜಯನಗರ ಕಾಲೋನಿಯಲ್ಲಿರುವ ಐವತ್ತು ವರ್ಷಗಳ ಪುರಾತನ ವಿಗ್ನೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶನ ಮೂರ್ತಿ ಪ್ರತಿಷ್ಟಾಪಿಸಿದ್ದೂ, ಮೂರ್ತಿಯ ಪೂಜೆಯನ್ನು ಪಂಚಾಮೃತ ಅಭಿಷೇಕ ಮಾಡಿ, ನೆನೆಗಡಲೆಯ ಹಾರದಿಂದ ಅಲಂಕರಿಸಿ, ಬೆಳ್ಳಿ ಕಿರೀಟ ಧರಿಸುವ ಮೂಲಕ ಸಿದ್ದೇಶ್ವರ ಶಾಸ್ತ್ರಿಗಳು ಹಾಗೂ ಮುನಿಕುಮಾರ ಹಿರೇಮಠ ಅವರು ಮಾಡಿದರು. ನಂತರ ಡಾ. ಪಂಚಾಕ್ಷರಿ ಪುಟ್ಟರಾಜ ಕವಿ ಶಿವಯೋಗಿಯವರ ಶಿಷ್ಯರಾದ ಬಂಡಯ್ಯ ಶಾಸ್ತ್ರಿಗಳು ಶರಣ ಚರಿತಾಮೃತ ವಿಷಯದ ಕುರಿತು ಪ್ರವಚನ ನೀಡಿದರೆ ಅವರಿಗೆ ಸಂಗೀತದ ಸಾಥನ್ನ ಗುರುಶಾಂತಯ್ಯ ಭೂಸನೂರ ನೀಡಿದರು, ಇನ್ನೂ ತಬಲಾ ಸಾಥನ್ನ ಸಿದ್ದಣ್ಣ ದೇಸಾಯಿ ಅವರು ನೀಡಿದರು. ಬಳಿಕ ವಿಶೇಷವಾಗಿ ೧೦೧ ಮಹಿಳೆಯರಿಗೆ ಶ್ರೀಮತಿ ವಂದನಾ ಸಂತೋಷ ಪಟ್ಟಣ ಪರಿವಾರದಿಂದ ಉಡಿತುಂಬುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಮೀಟಿಯ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಪಾಟೀಲ್, ಉಪಾಧ್ಯಕ್ಷರಾದ ಡಾ.ಸಂತೋಷ ಕೋಟನೂರ, ಸೆಕ್ರೆಟ್ರಿ ಮುನಿಕುಮಾರ ಹಿರೇಮಠ, ಸೋಮದತ್ತ ಪಾಟೀಲ್, ಶ್ರೀನಾಥ್ ಟೋಪಿ, ಅಜಯ್ ಮಿಶ್ರಾ ಸೇರಿದಂತೆ ಕಮೀಟಿಯ ಎಲ್ಲಾ ಪದಾಧಿಕಾರಿಗಳು ಕಾಲೋನಿಯಲ್ಲಿನ ಮಹಿಳೆಯರು, ಹಿರಿಯರು, ಮುದ್ದುಮಕ್ಕಳು, ಹಲವರು ಪ್ರವಚನ ಕೇಳಲು ಸೇರಿದ್ದರು