. ಗದುಗಿನ ಗಾನಯೋಗಿ ಪಂಡಿತ ಪುಟ್ಟರಾಜ್ ಗವಾಯಿ ಅವರ 110ನೇ ಜಯಂತೋತ್ಸವದ ಪ್ರಯುಕ್ತ ಜುಲೈ 11ರಂದು ಸಂಗಿತೋತ್ಸವ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಸಂಗೀತ ರಸ ಖುಷಿ ಪಂಡಿತ ಪುಟ್ಟರಾಜ್ ಗವಾಯಿ ಸಮಗ್ರ ಸೇವಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಸಿದ್ದಾರೂಢ ಅವರಳ್ಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಗೀತ ರಸ ಖುಷಿ ಪಂಡಿತ ಪುಟ್ಟರಾಜ್ ಗವಾಯಿ ಸಮಗ್ರ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜುಲೈ 11ರಂದು ನಗರದ ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಗದುಗಿನ ಗಾನಯೋಗಿ ಪಂಡಿತ ಪುಟ್ಟರಾಜ್ ಗವಾಯಿ ಅವರ 110ನೇ ಜಯಂತೋತ್ಸವ ಸಮಾರಂಭ ಆಯೋಜನೆ ಮಾಡಲಾಗಿದ್ದು, ಜಯಂತಿ ಪ್ರಯುಕ್ತ ಸಂಗಿತೋತ್ಸವ ಸಮಾರಂಭ, ಸಾಮವೇದ ಸಮ್ರಾಟ ಪುಟ್ಟರಾಜಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಹಾಗೂ ಗಾನಯೋಗಿ ಗುರುಪುಟ್ಟರಾಜ ಮಾಸಿಕ ಸಂಗೀತ ಸಾಹಿತ್ಯ ಲಹರಿ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ಅನೇಕ ಮಠಾಧೀಶರು, ರಾಜಕೀಯ ಗಣ್ಯರು ಹಾಗೂ ಅನೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.





