ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರ ಹಾಗೂ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಚುನಾವಣೆ ಜುಲೈ 21ರಂದು ನಿಗಧಿ ಮಾಡಲಾಗಿದೆ ಎಂದು ಉಪ ಚುನಾವಣಾಧಿಕಾರಿ ಎಸ್ ಎಮ್ ಕಾಡಾಧಿ ತಿಳಿಸಿದ್ದಾರೆ.
ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಷ್ಠಿತ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರ ಹಾಗೂ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಚುನಾವಣೆ ನಿಗಧಿ ಮಾಡಲಾಗಿದ್ದು, ನಾಮಪತ್ರ ಸಲ್ಲಿಕೆ ಜೂನ್ 27 ರಿಂದ ಜುಲೈ 04ರ ವರೆಗೆ ನಡೆಯಲಿದ್ದು, ಜುಲೈ 05 ಕ್ಕೆ ನಾಮಪತ್ರ ಪರಿಶೀಲನೆ, 08ರಂದು ನಾಮಪತ್ರ ಹಿಂಪಡೆಯ ಕೊನೆಯದಿನವಾಗಿದೆ. ಇನ್ನು ಜುಲೈ 21ಕ್ಕೆ ಮತದಾನ ನಡೆಯಲಿದ್ದು, ಅಂದೆ ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.