ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ..
ಹಣವನ್ನ ಬಾಜಿ ಕಟ್ಟಿ ಕಾನೂನು ಬಾಹಿರವಾಗಿ ಪೋಕರ್ ಆಟ ಆಡಿಸುತ್ತಿದ್ದ ಮಾಲೀಕ..
ದಾಳಿ ಮಾಡಿ ಪೋಕರ್ ಗೇಮ್ ಆಡಿಸುತ್ತಿದ್ದ ಮಾಲೀಕನ ಬಂಧನ..
ಮುಕೇಶಂ ಚಾವ್ಲಾ ಪೋಕರ್ ಗೇಮ್ ನಡೆಸುತ್ತಿದ್ದ ಆರೋಪಿ…
ಗೋಲ್ಡನ್ ಏಸ್ ಪೋಕರ್ ರೂಮ್ ಹೆಸರನಲ್ಲಿ ಪೋಕರ್ ಗೇಮ್ ನಡೆಸುತ್ತಿದ್ದ ಮುಕೇಶ್ ಚಾವ್ಲ..
ಕೋರಮಂಗಲದ 80 ಫೀಟ್ ರಸ್ತೆಯಲ್ಲಿ ಗೇಮಿಂಗ್ ಶಾಪ್ ಓಪನ್ ಮಾಡಿದ್ದ ಮುಕೇಶ್ ಚಾವ್ಲ..
ರಾತ್ರಿ ಪೂರ್ತಿ ಪೋಕರ್ ಆಟ ಆಡಿಸುತ್ತಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು…
ಮಾಹಿತಿ ಆದರಿಸಿ ಕಳೆದ ಶನಿವಾರ ರಾತ್ರಿ ದಾಳಿ ಮಾಡಿದ್ದ ಸಿಸಿಬಿ…
ಮುಕೇಶ್ ಈ ಹಿಂದೆ ದೇವನಹಳ್ಳಿ ಬಳಿ ಪೋಕರ್ ಅಡ್ಡೆ ನಡೆಸಿ ಸಿಸಿಬಿ ಪೊಲೀಸ್ರ ಕೈಗೆ ಲಾಕ್ ಆಗಿದ್ದ..
ಇದೀಗ ಮತ್ತೆ ಕೋರಮಂಗಲದಲ್ಲಿ ಪೋಕರ್ ಗೇಮ್ ಓಪನ್ ಮಾಡಿದ್ದ..
ಸಿಸಿಬಿ ಸಂಘಟಿತ ಅಪರಾಧ ದಳ(OCW) ಅಧಿಕಾರಿಗಳಿಂದ ಕಾರ್ಯಾಚರಣೆ..
ದಾಳಿ ಮಾಡಿ ಪೋಕರ್ ಗೇಮ್ ಬಳಸುವ ವಸ್ತುಗಳು ಹಾಗೂ ಆಟಕ್ಕೆ ಬಾಜಿ ಕಟ್ಟಿದ್ದ ಲಕ್ಷಾಂತರ ಹಣ ವಶಕ್ಕೆ..