ದಿನಾಂಕ : 19-01-2026 ಸೋಮವಾರ ಸಮಯ ಬೆಳಗ್ಗೆ 10.00 ರಿಂದ ಸಾಯಂಕಾಲ 6 ರವರೆಗೆ ಮಾನ್ಯ ಶ್ರೀ ಅವಿನಾಶ ಜಾಧವಜೀ ಶಾಸಕರು ಚಿಂಚೋಳಿ ಇವರ ಕಛೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಲಾಗುವದು ಅಂತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ ರಾಜ್ಯ ಸಿಮೆಂಟ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ಇತರ ಸೌಲಭ್ಯಗಳು ಸೆಂಟ್ರಲ್ ಸಿಮೆಂಟ ವೇಜಬೋರ್ಡು ಜಾರಿ ಮಾಡಲು ಒತ್ತಾಯಿಸಿ ಬೇಡಿಕೆಗೆ ಸಂಬಂಧಪಟ್ಟಂತೆ ದಿನಾಂಕ : 09-07-2024 ರಂದು ಕಾರ್ಮಿಕ ಸಚಿವಾಲಯದ ಅಧೀನ ಕಾರ್ಯದರ್ಶಿ ನವ ದೆಹಲಿ ಅವರು ರಾಜ್ಯ ಮುಖ್ಯಸ್ಥರು ಕೇಂದ್ರ ಕಾರ್ಮಿಕ ಇಲಾಖೆ ಬೆಂಗಳೂರು ಇವರಿಗೆ ಸಿಮೆಂಟ ಕಂಪನಿಗಳ ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ಇತರ ಸೌಲಭ್ಯಗಳು ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಆದರೆ ಈ ಅಧಿಕಾರಿಯು ಕ್ರಮ ಕೈಗೊಳ್ಳುತ್ತಿಲ್ಲ ಆದ್ದರಿಂದ ಈ ವಿವಾದದಲ್ಲಿ ಮಾನ್ಯ ಶಾಸಕರು ಚಿಂಚೋಳಿ ಮಧ್ಯ ಪ್ರವೇಶ ಮಾಡಲು ಒತ್ತಾಯಿಸಿ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ





