ಜನವರಿ 21 ರಂದು ರಾಜ್ಯ ಸರ್ಕಾರದಿಂದ ಚೌಡಯ್ಯನವರ ಜಯಂತ್ಯೋತ್ಸವದ ಪ್ರಯುಕ್ತ ಜನ ಜಾಗೃತಿ ಅಭಿಯಾನಕ್ಕೆ ಅದ್ಧೂರಿ ಚಾಲನೆ ನೀಡಲಾಯ್ತುಸೈದಾಪೂರ ಸಮೀಪ ಜ.04 ರಿಂದ ಜನವರಿ 19 ರವರೆಗೆ ನಡೆಯಲಿರುವ ಜನಜಾಗೃತಿ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ನಿಜ ಶರಣ ಅಂಬಿಗೇರ ಚೌಡಯ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದರು ಸೈದಾಪೂರ ಹೋಬಳಿಯಲ್ಲಿ ಬರುವ ನೀಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಜನವರಿ 21ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಮತ್ತು ಜನವರಿ 14 ಮತ್ತು 15 ರಂದು ಹಾವೇರಿ ಜಿಲ್ಲೆಯ ಟಿ. ನರಸಿಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಚನ ಗ್ರಂಥ ಮಹಾರಥೋತ್ಸವ ಜರುಗಲಿದೆ ಜನಜಾಗೃತಿ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಅವರು ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು ಇದಕ್ಕು ಮುಂಚೆ ಗ್ರಾಮದಲ್ಲಿ ಪ್ರಮುಖ ರಸ್ತೆಯಲ್ಲ್ಲಿ ಬಾಜಿ ಭಜಂತ್ರಿಗಳ ಮೂಲಕ ಮಹಿಳೆಯರು ಯುವಕರು ಕೋಲಿ ಸಮಾಜದ ಮುಖಂಡರು ಸೇರಿ ಶ್ರೀ ನಿಜಶರಣ ಅಂಬಿಗೇರ ಚೌಡಯ್ಯನವರ ಮೂರ್ತಿ ಅಭಿಯಾನಕ್ಕೆ ಭವ್ಯ ಮೆರವಣಿಗೆ ಸ್ವಾಗತ ನೀಡಿದರು ಕೋಲಿ ಸಮಾಜದ ಜನಜಾಗೃತಿ ಜಾಥಾವು ಜನವರಿ 19 ರವರೆಗೆ ಹೋಬಳಿಗಳಲ್ಲಿ ತೆರಳಲಿದೆ ಎಂದರು. ಪ್ರತಿ ಹೋಬಳಿ ಮಟ್ಟದಲ್ಲಿ ಹಂತ ಹಂತವಾಗಿ ಜಾಗೃತಿ ಅಭಿಯಾನ ತೆರಳಲಿದೆ ಅಂಬಿಗರ ಚೌಡಯ್ಯನವರ ವಚನಗಳು ಮತ್ತು ತತ್ವಾದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಮತ್ತು ವಿಠಲ ಹೇರೂರು ಅವರ ಮಾರ್ಗದರ್ಶನದಲ್ಲ್ಲಿ ಸಾಗಬೇಕೆಂದು ತಿಳಿಸಿದರು





