ಕಲಬುರಗಿ ನಗರದಲ್ಲಿ ಸುಮಾರು 7 ವರ್ಷಗಳ ಹಿಂದೆ ಪೊಲೀಸ್ ಆಯುಕ್ತಾಲಯ ಸ್ಥಾಪನೆಯಾಗಿದ್ದು ಮಾನ್ಯ ಪ್ರಧಾನ ಕಛೇರಿ ಬೆಂಗಳೂರು ರವರ ಆದೇಶದನ್ವಯ ಪ್ರತಿ ಪೊಲೀಸ್ ಠಾಣೆಗೆ 4 ಜನ ಪಿ.ಎಸ್.ಐ ರವರುಗಳು ಇರಬೇಕು. ಆದರೆ ಕಲಬುರಗಿ ನಗರದಲ್ಲಿ ಪ್ರತಿ ಠಾಣೆಗೆ | ಪಿ.ಎಸ್.ಐ ರಂತೆ ಇದ್ದು ಕಲಬುರಗಿ ನಗರದಲ್ಲಿ ಕಾನೂನು ಮತ್ತು ಸೂವೈವಸ್ಥೆ ಕಾಪಾಡಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಅಹಿಂದ ಚಿಂತಕರ ವೇದಿಕೆ ಆರೋಪಿಸಿದೆ ಹೈದ್ರಾಬಾದ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿ ನಗರಕ್ಕೆ ಸಾಕಷ್ಟು ಪೊಲೀಸ್ ಸಿಬ್ಬಂದಿಗಳು, ಬೇಕಾಗಿದ್ದು ಇರುತ್ತದೆ. ಕಲಬುರಗಿ ನಗರದಲ್ಲಿ ದಿನನಿತ್ಯ ಕೊಲೆ, ಸುಲಿಗೆಗಳ ಸಂಖ್ಯೆ ಮತ್ತು ಅಪರಾಧ ಪ್ರಕರಣಗಳು ಗಣನೀಯವಾಗಿ ಏರಿಕೆ ಯಾಗುತ್ತಿರುವುದು ವಿಷಾದನೀಯವಾಗಿದೆ ಸರಕಾರದ ಆದೇಶಗಳಿದ್ದರು ಪೊಲೀಸ್ ಇಲಾಖೆಯನ್ನು ಬಲಿಷ್ಠಗೊಳಿಸದೆ ಕಾಂಗ್ರೇಸ್ ಸರಕಾರ ಬರಿ ಹೆಸರಿಗಾಗಿ ಸರಕಾರ ನಡೆಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಒಟ್ಟು ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲು ಬರುವ 14 ಠಾಣೆಗಳಲ್ಲಿ ಮಾನ್ಯ ಪ್ರಧಾನ ಕಛೇರಿ ಬೆಂಗಳೂರು ರವರ ಪ್ರಕಾರ ಮಂಜೂರಾತಿ ಬಲ 35 ಪಿ.ಎಸ್.ಐ ಇದ್ದರು ಸಹ ವಾಸ್ತವಿಕ ಸ್ಥಿತಿಯಲ್ಲಿ 14 ಠಾಣೆಗಳಲ್ಲಿ ಒಟ್ಟು 13 ಪಿ.ಎಸ್.ಐ ಗಳ ಜೊತೆ ಪೊಲೀಸ್ ಆಯುಕ್ತಾಲಯವನ್ನು ನಡೆಸುತ್ತಿರುವುದು ದುರಂತದ ಸಂಗತಿ ಹಾಗಾಗಿ ಅದನ್ನ ಸರಿಪಡಿಸುವಂತೆ ಆಗ್ರಹಿಸಲಾಗಿದೆ





