ನಾಯಕ ತಳವಾರ ಜಾತಿಯ ಬಗ್ಗೆ ಸುಳ್ಳನ್ನು ಸತ್ಯ ಮಾಡಲು ಹೊರಟ ಕೆಲ ಮುಖಂಡರ ನಡೆಯು ಹಾಸ್ಯಸ್ಪದವಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಪಟ್ಟಿಯ ಕ್ರಮ ಸಂಖ್ಯೆ 38ರಲ್ಲಿ ಬರುವ ನಾಯಕ,ವಾಲ್ಮೀಕಿ, ಬೇಡ ಸಮುದಾಯದ ತಳವಾರ ಪರಿವಾರ ಜಾತಿಗಳನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡಿ ಆದೇಶ ಮಾಡಿದ್ದು.ಆದರೆ ಕೆಲ ರಾಜಕೀಯ ಮುಖಂಡರು ಜನರನ್ನು ದಾರಿ ತಪ್ಪಿಸಿ ಕೆಲಸ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿನಾಯಕರ ಸಂಘ ತಿಳಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಿನಾಂಕ : 24-12-2025ರಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ನಾಯಕ ತಳವಾರ ಪರಿವಾರ ಜಾತಿಗೆ ಸೇರಿದ ವ್ಯಕ್ತಿಗಳಿಗೆ ಮಾತ್ರ ಎಸ್.ಟಿ ಪ್ರಮಾಣ ಪತ್ರ ನೀಡಬೇಕು ಹೊರತು ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಜಾತಿಗೆ ಯಾವುದೇ ಕಾರಣಕ್ಕೂ ಎಸ್.ಟಿ ಪ್ರಮಾಣ ಪತ್ರಗಳನ್ನು ನೀಡಬಾರದು ಎಂದು ಸರ್ಕಾರದ ಹಿಂದಿನ ಎಲ್ಲಾ ಆದೇಶಗಳನ್ನು ಉಲ್ಲೇಖ ಮಾಡಿ ಸ್ಪಷ್ಟಿಕರಣ ನೀಡಿದ್ದು,ಆದರೆ ಕೆಲ ರಾಜಕೀಯ ಮುಖಂಡರು ಇದನ್ನೇ ಬಂಡವಾಳ ಮಾಡಿಕೊಂಡು ಅಲ್ಲಿ ಇಲ್ಲಿ ಸಭೆಯಲ್ಲಿ ಈ ಆದೇಶ ಮಾಡಿಸಿದ್ದು ಹಿಂದುಳಿದ ವರ್ಗದ ತಳವಾರಗೆ ಎಸ್.ಟಿ ಪ್ರಮಾಣ ಪತ್ರ ಕೊಡಿಸಿದ್ದೇನೆ ಎಂದು ಜನರ ದಾರಿ ತಪ್ಪಿಸುತ್ತಿರುವುದು ಖಂಡನೀಯವಾಗಿದೆ ಎಂದಿದ್ದಾರೆ





