ಯಾದಗಿರಿ ಕಂದಾಯ ಅಧಿಕಾರಿಗಳ ಮಹಾ ಎಡವಟ್ಟು ಕಣೇಕಲ್ ಗ್ರಾಮಸ್ಥರ ಕಂಗಾಲು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಣೇಕಲ್ ಗ್ರಾಮಸ್ಥರ ಸಂಕಷ್ಟ, ಅಧಿಕಾರಿಗಳ ತಪ್ಪಿನಿಂದ ಬಲು ದೂರವಾದ ಹೋಬಳಿ ಕೇಂದ್ರ ಹಾಗೂ ತಾಲೂಕಾ ಕೇಂದ್ರ ಕಣೇಕಲ್ ಗ್ರಾಮವನ್ನು ಅವೈಜ್ಞಾನಿಕವಾಗಿ ಹೋಬಳಿ ಕೇಂದ್ರ,ತಾಲೂಕಾ ಕೇಂದ್ರಕ್ಕೆ ಸೇರ್ಪಡೆ ಮಾಡಿ ಕೈತೊಳೆದುಕೊಂಡ ಅಧಿಕಾರಿಗಳು, ಅಧಿಕಾರಿಗಳ ತಪ್ಪಿನಿಂದ ಗ್ರಾಮಸ್ಥರು ಸಂಕಷ್ಟ ಸರಕಾರಿ ಕಚೇರಿ ಕಾರ್ಯಕ್ಕೆ 50 ರಿಂದ 60 ಕಿಮೀ ಜನರು ಅಲೆದಾಡುವ ದುಸ್ಥಿತಿ ಅಧಿಕಾರಿಗಳ ನಡೆ ವಿರುದ್ದ ಕಣೇಕಲ್ ಗ್ರಾಮಸ್ಥರ ಆಕ್ರೋಶ, 4 ಕಿಮೀ ಸಮೀಪದ ಸೈದಾಪುರ ಹೋಬಳಿ ಕೇಂದ್ರಕ್ಕೆ ಗ್ರಾಮ ಸೇರ್ಪಡೆ ಮಾಡ್ದೆ 50 ಕಿಮೀ ದೂರದ ಕೊಂಕಲ್ ಹೋಬಳಿ ಕೇಂದ್ರಕ್ಕೆ ಕಣೇಕಲ್ ಗ್ರಾಮ ಸೇರ್ಪಡೆ, ಅದೆ ರೀತಿ 35 ಕಿಮೀ ಸಮೀಪದ ಯಾದಗಿರಿ ತಾಲೂಕಾ ಕೇಂದ್ರಕ್ಕೆ ಸೇರ್ಪಡೆ ಕೈ ಬಿಟ್ಟು 60 ಕಿಮೀ ದೂರದ ಗುರುಮಠಕಲ್ ತಾಲೂಕಾ ಕೇಂದ್ರಕ್ಕೆ ಗ್ರಾಮ ಸೇರ್ಪಡೆ, ಸೈದಾಪುರ ಹೋಬಳಿ ಪಕ್ಕದಲ್ಲೇ ಇದ್ರೂ ಕಣೇಕಲ್ ಗ್ರಾಮ ಬೇರೆ ಹೋಬಳಿಗೆ ಸೇರ್ಪಡೆ, ಹೀಗಾಗಿ ವಿದ್ಯಾರ್ಥಿಗಳು ಜಾತಿ ಆದಾಯ ಪ್ರಮಾಣ ಪತ್ರ ತರಲು ಸಂಕಷ್ಟ, ವಾಸಸ್ಥಳ ತರಲು,ರೈತರು ಪಹಣಿ ತರಬೇಕಾದ್ರೂ ದೂರ ಆಗುತ್ತಿದೆ ಎಂದು ಗ್ರಾಮಸ್ಥರು ಬೇಸರ, ಕಣೇಕಲ್ ಸಮೀಪದ ಸೈದಾಪುರ ಹೋಬಳಿ ಕೇಂದ್ರಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹ, ಗುರುಮಠಕಲ್ ತಾಲೂಕಾ ಕೇಂದ್ರಕ್ಕೆ ಸೇರ್ಪಡೆ ಮಾಡಿದನ್ನು ಕೈ ಬಿಟ್ಟು ಯಾದಗಿರಿ ತಾಲೂಕಾ ಕೇಂದ್ರಕ್ಕೆ ಸೇರ್ಪಡೆ ಮಾಡುವಂತೆ ಗ್ರಾಮಸ್ಥರ ಆಗ್ರಹ, ಸೈದಾಪುರ ಹೋಬಳಿ ಕೇಂದ್ರಕ್ಕೆ ಸೇರ್ಪಡೆ ಮಾಡದಿದ್ದರೆ ಬೃಹತ್ ಹೋರಾಟ ಮಾಡುವ ಬಗ್ಗೆ ಗ್ರಾಮಸ್ಥರ ಎಚ್ಚರಿಕೆ





