ತಾಲ್ಲೂಕು ಅಧ್ಯಕ್ಷ ಮೊನಪ್ಪ ಜಿ. ವಿಶ್ವಕರ್ಮ ಅವರನ್ನು ಮುಂದುವರಿಸಲು ಆಗ್ರಹ ಕಾಳಗಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭ ತಾಲ್ಲೂಕು ಅಧ್ಯಕ್ಷರಾದ ಮೊನಪ್ಪ ಜಿ. ವಿಶ್ವಕರ್ಮ ಅವರನ್ನು ಮುಂದುವರಿಸಬೇಕೆಂದು ಹಣಮಂತ ಸುತಾರ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದರು. ಅಧ್ಯಕ್ಷರಾಗಿ ತಮ್ಮ ಕಾರ್ಯಾವಧಿಯಲ್ಲಿ ಮೊನಪ್ಪ ಜಿ. ವಿಶ್ವಕರ್ಮ ಅವರು ವಿಶ್ವಕರ್ಮ ಸಮಾಜದ ಪರವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದು, ಸರಳ ವ್ಯಕ್ತಿತ್ವ ಹಾಗೂ ಸಮಾಜಪರ ಕಾಳಜಿಯಿಂದ ಗುರುತಿಸಿಕೊಂಡ ನಾಯಕರೆಂದು ಅವರು ಹೇಳಿದರು. ಇಂತಹ ಅಧ್ಯಕ್ಷರು ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಅವರ ರಾಜೀನಾಮೆಯಿಂದ ಸಮಾಜದ ಸದಸ್ಯರಿಗೆ ತೀವ್ರ ನೋವು ಉಂಟಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜದ ಹಲವರು ಜಮಾಯಿಸಿ, ಜಿಲ್ಲಾ ಅಧ್ಯಕ್ಷರು ಮೊನಪ್ಪ ಜಿ. ವಿಶ್ವಕರ್ಮ ಅವರನ್ನು ಮನವೊಲಿಸಿ ತಾಲ್ಲೂಕು ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕೆಲ ಹಿರಿಯರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು.ಈ ಸಂದರ್ಭದಲ್ಲಿ ಹಣಮಂತ ಗೋಳಲಪ್ಪ ವಿಶ್ವಕರ್ಮ,ಮಲ್ಲಿಕಾರ್ಜುನ ವಿಶ್ವಕರ್ಮ,ಅಶೋಕ್ ವಿಶ್ವಕರ್ಮ,ಮನೋಹರ್ ವಿಶ್ವಕರ್ಮ, ಅಯ್ಯಪ್ಪ ವಿಶ್ವಕರ್ಮ,ಕಮಲಕರ್ ವಿಶ್ವಕರ್ಮ,ಸುನಂದಾ ಹೆಬ್ಬಾಳ,ಮಹಾನಂದ ವಿಶ್ವಕರ್ಮ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು





