ಚಿಂಚೋಳಿ ಪಟ್ಟಣದ ನವನಗರ ಬಡವಣೆಯಲ್ಲಿ ಕೇತಕಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ 12ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯವರ ಮಹಾಪಡಿ ಪೂಜೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಗಾಯಕಿ ದಿವ್ಯಾಹೆಗ್ಡೆ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆ ಹಾಡು ಮುಖಾಂತರ ಕಾರ್ಯಕ್ರಮವನ್ನು ಅದ್ದೂರಿಯಾಗಿ ಚಾಲನೆ ಮಾಡಿದರು ಕಾರ್ಯಕ್ರಮದಲ್ಲಿ ಕರಬಸಪ್ಪ ದೇಶಮುಕ್. ಗುರುಸ್ವಾಮಿಗಳಾದ ಶಿವ ಗುರುಸ್ವಾಮಿ, ಬಸವರಾಜ ಗುರುಸ್ವಾಮಿ, ಸಂಜೀವ ಪಾಟೀಲ್ ಗುರುಸ್ವಾಮಿ, ಬಸಯ್ಯಸ್ವಾಮಿ,ಮತ್ತು ಅನೇಕ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಧಾರಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಸ್ಥರು ಮತ್ತು ಕರ್ನಾಟಕ ತೆಲಂಗಾಣದ ವಿವಿಧ ಜಿಲ್ಲೆಯ ಅಯ್ಯಪ್ಪ ಸ್ವಾಮಿಯ ಮಾಲಧಾರಿಗಳು ಪಡಿ ಪೂಜ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು





